ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮೊಬೈಲ್ ಕಳ್ಳಸಾಗಣೆ ದಂಧೆ ನಿಲ್ಲುತ್ತಿಲ್ಲ. ಜೈಲಾಧಿಕಾರಿಗಳ ಕಣ್ಣುತಪ್ಪಿಸಿ ಮೊಬೈಲ್‌ಗಳು ಜೈಲು ಸೇರುತ್ತಿವೆ ಎಂದು ಹೇಳಲಾಗುತ್ತಿದೆ.
ಹಿಂಡಲಗಾ ಜೈಲಿನಲ್ಲಿ ಮೊಬೈಲ್‌ಗಳು ಸೇರುತ್ತಿರುವ ಬಗ್ಗೆ ಒಂದೇ ವಾರದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ ದಾಖಲಾಗಿವೆ. ಡಿಸೆಂಬರ್ 11ರಂದು ಶಾಹೀದ್ ಖುರೇಷಿ ವಿರುದ್ಧ ಕೇಸ್ ದಾಖಲಾಗಿದೆ. ಡಿಸೆಂಬರ್ 21ರಂದು ಗೋಕಾಕ್ ಮೂಲದ ಗೋಕಾಕ್ ಹಡಗಿನಾಳ್ ವಿರುದ್ಧ ಕೇಸ್ ದಾಖಲಾಗಿದೆ.
ಹೊರಗಿನಿಂದ ಜೈಲಿನ ಒಳಗೆ ಮೊಬೈಲ್ ಎಸೆದಿದ್ದ ಮಾರುತಿ ಅಡಕೈ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೈಲಿನ ಕಾವಲಿನಲ್ಲಿ ಇದ್ದ ಕೈಗಾರಿಕಾ ಭದ್ರತಾ ಪಡೆಯಿಂದ ಪ್ರಕರಣ ಬಯಲಾಗಿದ್ದು, ಜೈಲಿನ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಕೊನ್ನೂರರಿಂದ ಪ್ರಕರಣ ದಾಖಲಾಗಿದೆ.
PublicNext
22/12/2024 06:40 pm