ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣ

ಬೆಳಗಾವಿ: ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ‌ ಜಮೀನಿನಲ್ಲಿ ನಡೆದಿದೆ.

ಆಸ್ತಿವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಸಹೋದರನ ಭೀಕರ ಹತ್ಯೆಯನ್ನು ಪಾಪಿ ಅಣ್ಣಾ ಮಾಡಿದ್ದಾನೆ.‌ ಯರಗಟ್ಟಿಯ ಗೋಪಾಲ ಬಾವಿಹಾಳ ( 27) ಹತ್ಯೆಯಾದ ದುರ್ದೈವಿ.‌

ಮಾರುತಿ ಬಾವಿಹಾಳ (30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ. ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಗೋಪಾಲ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ ಅಲ್ಲದೇ ಗೋಪಾಲ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಪತ್ನಿ ಮನೆಯಲ್ಲಿ ಇರಿಸಿದ್ದ. ಹೀಗಾಗಿ ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲ ಮೇಲೆ ಮಾರುತಿ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದಾನೆ.

ಇನ್ನೂ ಗೋಪಾಲ ತಂದೆ ಅರ್ಜುನ್‌ ಬಾವಿಹಾಳಗೆ ಮೂವರು ಗಂಡು ಮಕ್ಕಳು. ಈ ಮೂರು ಜನ ಸಹೋದರರು ಕಳೆದ ಹದಿನೈದು ದಿನಗಳ ಹಿಂದಷ್ಟೇ ತಮಗೆ ಬಂದ ಜಮೀನು ಪಾಲು, ಹಣ ಪಡೆದು ಬೇರೆ ಬೇರೆಯಾಗಿದ್ದರು. ಮೂವರು ಜನ ಸಹೋದರರಿಗೂ ಒಂದೊಂದು ಟ್ರಾಕ್ಟರ್ ಪಾಲು ಬಂದಿತು.

ಮೃತ ಗೋಪಾಲನಿಗೆ ಬಂದಿದ್ದ ಟ್ರಾಕ್ಟರ್ ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಗಲಾಟೆ ಆಗಿತ್ತು.‌ ನಾನು ದುಡಿದಿರೋನ್ನ ಹಾಳು ಮಾಡ್ತಿರುವೆ ಎಂದು ಆಗಾಗ್ಗೆ ಇಬ್ಬರು ಸಹೋದರ ನಡುವೆ ಜಗಳ ಗಲಾಟೆ ಆಗುತ್ತಿತು. ಕುಡಿತದ ದಾಸನಾಗಿದ್ದ ಗೋಪಾಲ ಮನೆಯವರಿಗೂ ಬೇಡಾಗಿದ್ದ. ಟ್ರಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ತಮ್ಮನನ್ನು ಕೊಲೆ‌ ಮಾಡಲೆಂದೇ ಮಾರುತಿ ಹೊಂಚಿಹಾಕಿ ಕುಳಿತಿದ್ದ. ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲ ಬೈಕ್ ಬರುವಾಗ ಟ್ರಾಕ್ಟರ್ ಹಾಯಿಸಿದ್ದಾನೆ.‌

ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರಾಕ್ಟರ್ ಹಾಯಿಸಿ ಹತ್ಯೆ ಮಾಡಿದ್ದಾನೆ. ಟ್ರಾಕ್ಟರ್ ನಡಿ ಸಿಲುಕಿದ ಭಯಾನಕ ದೃಶ್ಯ ಸ್ಥಳೀಯರು ಮೊಬೈಲ್ ಸೆರೆ ಹಿಡಿದಿದ್ದಾರೆ.‌ ತಮ್ಮನ ಕೊಲೆ ಮಾಡಿದ ಮಾರುತಿ ತಾನೇ ಪೊಲೀಸ ಠಾಣೆಗೆ ಶರಣಾಗಿದ್ದಾನೆ.‌ ಈ ಘಟನೆ ಕುರಿತು ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.‌

Edited By : Abhishek Kamoji
PublicNext

PublicNext

22/12/2024 09:50 am

Cinque Terre

16.74 K

Cinque Terre

0

ಸಂಬಂಧಿತ ಸುದ್ದಿ