ಆನೇಕಲ್: ಬಿಜೆಪಿಯವರು ಬಬಲ್ಸ್ ಥಿಯರಿಸ್ಟ್ ಗಳು. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಆಗುತ್ತೆ ಅಂತ ಭ್ರಮೆಯಲ್ಲಿ ಇದ್ದಾರೆ. ಇದರಿಂದ ಬಿಜೆಪಿ ಸಂಸ್ಕೃತಿ ಏನೆಂದು ತಿಳಿಯುತ್ತದೆ. ಏನೋ ಸಾಧನೆ ಮಾಡಿ ಯುದ್ಧ ಗೆದ್ದು ಬಂದ ಹಾಗೆ ಸತ್ಯಮೇವ ಜಯತೆ ಅಂತಿರುವ ಇವರಿಗೆ ನಾಚಿಕೆಯಾಗಬೇಕು. ಸಿ.ಟಿ. ರವಿ ಬಂಧನ ವಿಚಾರದಲ್ಲಿ ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನಲ್ಲಿ ಇಂದು 13ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜಪ ಮಾಡುವ ಬಿಜೆಪಿಯವರು ಮರ್ಯಾದೆ ಇಟ್ಟುಕೊಂಡಿಲ್ಲ. ಮಹಿಳೆಯರ ಬಗ್ಗೆ ಹೀಗೆ ಬೈದಾಗ ಸಮಾಜ ಏನ್ಮಾಡ್ಬೇಕು? ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕ ಹೀಗೆ ನಿಂದಿಸಿದ್ರೆ ಏನ್ ಮಾಡ್ಬೇಕು? ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು. ಫೇಕ್ ಎನ್ ಕೌಂಟರ್ ಮಾಡಲು ಕಾಂಗ್ರೆಸ್ ಯತ್ನಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಆರೋಪದ ಬಗ್ಗೆ ಮಾತನಾಡಿ, ಅವ್ರು ರಾಜ್ಯ ರಾಜಕೀಯದ ಬಗ್ಗೆ ಮುತುವರ್ಜಿ ವಹಿಸಿದ್ದರೆ ಅನುದಾನ ಬಂದು ರಾಜ್ಯ ಅಭಿವೃದ್ಧಿ ಆಗುತ್ತಿತ್ತು. ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಬಾಯಿ ಬಿಚ್ಚೋದಿಲ್ಲ ಎಂದು ಹರಿಹಾಯ್ದರು.
ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ, ಸಭಾಪತಿ ಬಸವರಾಜ ಹೊರಟ್ಟಿ, ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, drdo ಸತೀಶ್ ರೆಡ್ಡಿ, ಮಾಜಿ ಕ್ರೀಡಾಪಟು ಅಂಜು ಬಾಬ್ಬಿ ಜಾರ್ಜ್, ಇಸ್ರೋ ಡೈರೆಕ್ಟರ್ ಪ್ರಕಾಶ್ ರಾವ್, ವೈಸ್ ಚಾನ್ಸಲರ್ ಫ್ರೆಶ್ಲೇ ಶಾನ್, ಅಲಯನ್ಸ್ ಕಾಲೇಜಿನ ಚಾನ್ಸಲರ್ ಅಭಯ್ ಚಬ್ಬಿ ಮತ್ತಿತರ ಗಣ್ಯರು ಭಾಗಿಯಾಗಿದ್ದರು.
PublicNext
22/12/2024 05:47 pm