ಬೆಂಗಳೂರು: ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತ ಘಟನೆಯಲ್ಲಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮುರಬಗಿಯಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಸಾವನ್ನಪ್ಪಿದ ಚಂದ್ರಮ್ ಗೆ ಬೆಂಗಳೂರಿನ ಸಿಬ್ಬಂದಿ ವಿದಾಯ ಹೇಳಿದ್ದಾರೆ. ಆಸ್ಪತ್ರೆ ಯ ಆವರಣದಲ್ಲಿ 10 ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ಕೊಟ್ಟಿದ್ದು, ಮಹಾರಾಷ್ಟ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನೆಲಮಂಗಲದಲ್ಲಿ ಭೀಕರ ಅಪಘಾತ ಪ್ರಕರಣ ಸಂಬಂಧ ಆಸ್ಪತ್ರೆ ಆವರಣದಲ್ಲಿ ಕುಟುಂಬದವರು ಕಣ್ಣೀರಿನ ಕೋಡಿ ಹರಿಸಿದ್ದಾರೆ. ದೀಪಾವಳಿ ಸಂದರ್ಭ ಖರೀದಿಸಿದ್ದ ಕಾರು, ತನ್ನದಲ್ಲದ ತಪ್ಪಿಗೆ ಇಡೀ ಕುಟುಂಬವೇ ಅಗಲಿರುವುದು ಆಕ್ರಂದನಕ್ಕೆ ಕಾರಣ ಆಗಿದೆ. ಈ ಮಧ್ಯೆ, ಮೃತರು ಬದುಕಿದ್ದಾಗ ಮಾಡಿದ ಸಹಾಯ ನೆನೆದು ಕುಟುಬಸ್ಥರು ಅಳುತ್ತಿರುವ ದೃಶ್ಯಾವಳಿ ಕಂಡು ಬಂತು.
ಇನ್ನು ಅಪಘಾತದಲ್ಲಿ ಕಾರಿನ ಮೇಲೆ ಗಾಡಿ ಸಮೇತ ಬಿದ್ದ ಚಾಲಕನ ಕಾಲಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
22/12/2024 08:55 am