ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ : ಘಾಟಿ ದನಗಳ ಜಾತ್ರೆ ಆರಂಭ- ನವ ಕರ್ನಾಟಕ ಯುವಶಕ್ತಿ ವೇದಿಕೆಯಿಂದ ಉಚಿತ ಮೇವು

ದೊಡ್ಡಬಳ್ಳಾಪುರ : ಸುಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಆರಂಭವಾಗಿದ್ದು, ದೂರದಿಂದ ಬರುವ ಜಾನುವಾರುಗಳಿಗೆ, ರೈತರಿಗೆ ಉಚಿತ ಮೇವು, ನೀರು ವಿತರಣೆ ಕಾರ್ಯಕ್ರಮವನ್ನು ನವ ಕರ್ನಾಟಕ ಯುವಶಕ್ತಿ ವೇದಿಕೆ ಆಯೋಜನೆ ಮಾಡಿದೆ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಉಚಿತ ಮೇವು ವಿತರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದನಗಳ ಜಾತ್ರೆಗೆ ಸರ್ಕಾರದ ವತಿಯಿಂದ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಸಂಘಟನೆ ನವ ಕರ್ನಾಟಕ ಯುವಶಕ್ತಿ ವೇದಿಕೆಯವರು ಉಚಿತ ಜಾನುವಾರು ಮೇವು ನೀಡುತ್ತಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಜಾತ್ರೆಯ ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, ಇಂದು ಉದ್ಘಾಟನೆಯಾಗಿರುವ ಮೇವು ಮತ್ತು ನೀರು ವಿತರಣಾ ಕಾರ್ಯಕ್ರಮ ಇನ್ನೂ ಮೂರು - ನಾಲ್ಕು ದಿನ ಮುಂದುವರಿಯುತ್ತದೆ. ಮೊದಲ ದಿನವೇ 5 ಲೋಡ್ ಮೇವು ವಿತರಣೆ ಮಾಡಲಾಗಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಯ್ಯಣ್ಣನವರಿಗೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Edited By : Vinayak Patil
PublicNext

PublicNext

22/12/2024 08:02 am

Cinque Terre

17.61 K

Cinque Terre

0

ಸಂಬಂಧಿತ ಸುದ್ದಿ