ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳಾಗದ ತಾಯಂದಿರಿಗೆ ಗುಡ್ ನ್ಯೂಸ್..

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಂಪತಿಗಳಿಗೆ ನಾನಾ ಕಾರಣಗಳಿಂದ ಮಕ್ಕಳು ಆಗುತ್ತಿಲ್ಲ. ಶೇ 20% ರಿಂದ 25% ರಷ್ಟು ಮಹಿಳೆಯರು ಗರ್ಭಧಾರಣೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.. ಅದರಲ್ಲೂ ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್ ಮೆಂಟ್, ಆರ್ಥಿಕತೆ, ಗಂಡ ಹೆಂಡತಿಯರ ನಡುವಿನ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಹೆಚ್ಚು ಪೋಷಕರಿಗೆ ಮಕ್ಕಳಾಗುತ್ತಿಲ್ಲ. ಮಕ್ಕಳಗಾದ ಪೋಷಕರು ಕಂಗಾಲಾಗಿದ್ದಾರೆ..

ಹೀಗಾಗಿ ಮಕ್ಕಳನ್ನ ಪಡೆಯಲು ಸಾಕಷ್ಟು ಪೋಷಕರು ಐವಿಎಫ್ ನಂತಹ ಚಿಕಿತ್ಸೆ ಮೊರೆ ಹೋಗ್ತಿದ್ದಾರೆ. ಆದ್ರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಚಿಕಿತ್ಸೆ ನಿಲುಕದ ನಕ್ಷತ್ರವಾಗಿದೆ. ದಂಪತಿಗಳು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ. ಇತಂಹ ಪೋಷಕರಿಗೆ ಈಗ ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ.. ಹೌದು ಪ್ರಾರಂಭಿಕ ಹಂತದಲ್ಲಿ ಆರೋಗ್ಯ ಇಲಾಖೆ ಮಲ್ಲೇಶ್ವರಂ ಕೆ ಸಿ ಜಿ ಆಸ್ಪತ್ರೆಯಲ್ಲಿ ಉಚಿತ ಐವಿಎಫ್ ಚಿಕಿತ್ಸೆ ನೀಡಲು ಪ್ಲಾನ್ ಮಾಡಿದ್ದು ಈಗ ಇದಕ್ಕೆ ಸಮಗ್ರವಾದ ವರದಿಯೂ ತಜ್ಞರಿಂದ ಸಲ್ಲಿಕೆಯಾಗಿದೆ.

ಇಷ್ಟು ದಿನ ಶ್ರೀಮಂತ ವರ್ಗದ ಜನರಿಗೆ ಮಾತ್ರ ಸಿಗುತ್ತಿದ್ದ IVF ಚಿಕಿತ್ಸೆ, ಇನ್ಮುಂದೆ ಬಡ ಹಾಗೂ ಮಧ್ಯಮ ವರ್ಗದವರಿಗೂ ಲಭ್ಯವಾಗ್ತಿದೆ. ಇಷ್ಟು ದಿನ ಮಗು ಪಡೆಯಲು ಸಾಧ್ಯವಾಗದವರು IVF ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಿತ್ತು. ಇದಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿತ್ತು. ಆದ್ರೆ ಇನ್ಮುಂದೆ ಚಿಂತೆ ಬೇಡ ಯಾಕಂದ್ರೆ ಸರ್ಕಾರದಿಂದ ಮಕ್ಕಳಾಗದವರಿಗೆ ಐವಿಎಫ್ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ..

Edited By : Shivu K
PublicNext

PublicNext

22/12/2024 06:13 pm

Cinque Terre

9.92 K

Cinque Terre

0