ಪ್ರತಿ ಎರಡು ವರ್ಷಕ್ಕೊಮ್ಮೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತೆ. ಅದರಲ್ಲೂ ಈ ಬಾರಿ ಕನ್ಯಕಾ ಪರಮೇಶ್ವರಿ ದೇವಿಯ 90ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಿ ವಿಜೃಂಭಣೆಯಿಂದ ಮಹೋತ್ಸವನ್ನು ನೆರವೇರಿಸುತ್ತಿದ್ದಾರೆ.
8ನೇ ಕ್ರಾಸ್ ಮಲ್ಲೇಶ್ವರಂನಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಾವಿರಾರು ಕುಟುಂಬಗಳಿಗೆ ನೆರವಾಗಿದೆ. ಕೇವಲ ಆಧ್ಯಾತ್ಮಿಕ ಚಟುವಟಿಕೆಗಳಷ್ಟೇ ಅಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ಹೆಸರುವಾಸಿ. ಸ್ವತಃ ರಾಜ್ಯದ ರಾಜ್ಯಪಾಲರೇ ದೇವಸ್ಥಾನದ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಗೌರವ ಸಲ್ಲಿಸಿದ್ದಾರೆ.
ಇನ್ನು ದೇವಸ್ಥಾನದ ವಿಶೇಷ ಪೂಜೆ ಹಾಗೂ 90ನೇ ಪ್ರತಿಷ್ಠಾಪನಾ ಮಹೋತ್ಸವಕ್ಕೇ ಬಂದ್ರೆ, ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ವೈಕುಂಠ ದ್ವಾರ, ನಂತರ ಕೈಲಾಸ ಲೋಕ ಕೊನೆಗೆ ಬ್ರಹ್ಮ ಲೋಕ ಕಾಣಬಹುದು. ಕೈಲಾಸವೇ ಭೂಮಿಗೆ ಬಂದ ಹಾಗೆ ದೇವಾಲಯದ ಅಲಂಕಾರ ಇರುತ್ತದೆ.
ಇನ್ನು ಡಿಸೆಂಬರ್ 25ರ ವರೆಗೂ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಬೆಳಿಗ್ಗೆ 9:00 ರಿಂದ ರಾತ್ರಿ 9:00 ರವರೆಗೂ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಕೊನೆ ದಿನ ಕಾಶಿಯಿಂದ ಪಂಡಿತರು ಈ ದೇವಾಲಯಕ್ಕೆ ಭೇಟಿ ನೀಡಿ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಂತೆಯೇ ಇಲ್ಲಿಯೂ ಪೂಜೆ ನೆರವೇರಿಸಲಿದ್ದಾರೆ. ಎಲ್ಲ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕಮಿಟಿ ಸದಸ್ಯರು ಮನವಿ ಮಾಡಿದ್ದಾರೆ.
PublicNext
21/12/2024 07:02 pm