ದೊಡ್ಡಬಳ್ಳಾಪುರ : ವೃದ್ಧೆಯ 3.6 ಲಕ್ಷ ಮೌಲ್ಯದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದ ಸರಗಳ್ಳರನ್ನ ಪೊಲೀಸರು ಪತ್ತೆ ಮಾಡಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಜರ್ ಗೆಂದು ಆರೋಪಿಗಳನ್ನ ಗ್ರಾಮಕ್ಕೆ ಪೊಲೀಸರು ಕರೆತಂದಾಗ, ಸರಗಳ್ಳರಿಗೆ ಗ್ರಾಮದ ಮಹಿಳೆಯರು ಛೀಮಾರಿ ಹಾಕಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರು ಗ್ರಾಮದಲ್ಲಿ ಡಿಸೆಂಬರ್ 11 ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಘಟನೆ ನಡೆದಿದ್ದು, ಗ್ರಾಮದ 63 ವರ್ಷದ ಸರಸ್ವತಮ್ಮ ಎಂಬುವರ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ಕೊಂಡ ಕಳ್ಳರು ಬೈಕ್ ನಲ್ಲಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನೆಯಾದ ವಾರದಲ್ಲಿ ಇಬ್ಬರು ಸರಗಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಸಿಂಗವನಹಳ್ಳಿಯ ಷಡಕ್ಷರಿ, ಚಿಕ್ಕಬಳ್ಳಾಪುರ ಜಿಲ್ಲೆ ಸಾದನಹಳ್ಳಿಯ ಆದಿನಾರಾಯಣ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಕೃಷಿ ಕೆಲಸ ಮಾಡುವ ಷಡಾಕ್ಷರಿ ಕೂಲಿ ಕೆಲಸ ಮಾಡುವ ಆದಿನಾರಾಯಣ ಸರಗಳ್ಳತನ ಕೃತ್ಯಕ್ಕೆ ಕೈಹಾಕಿದ್ದಾರೆ. ಡಿಸೆಂಬರ್ 11 ರಂದು ಹುಣಸೆ ಮರ ಮಾರಾಟಗಾರರಂತೆ ಬೈಕ್ ನಲ್ಲಿ ಬಂದಿದ್ದ ಇವರು ಒಂಟಿಯಾಗಿ ಬರುತ್ತಿದ್ದ ವೃದ್ಧ ಮಹಿಳೆಯ ಮಾಂಗಲ್ಯ ಸರ ದೋಚುವ ಸಂಚು ನಡೆಸಿದರು.
ಆದಿನಾರಾಯಣ ಬೈಕ್ ನಿಲ್ಲಿಸಿಕೊಂಡು ರಸ್ತೆಯಲ್ಲಿ ಇದ್ದಾರೆ. ಹಸುವನ್ನ ಹೊಡೆದುಕೊಂಡು ಬರುತ್ತಿದ್ದ ಸರಸ್ವತಮ್ಮ ಎಂಬುವರನ್ನ ಹುಣಸೆ ಮರ ಕೊಡ್ತೀರಾ ಎಂದು ಮಾತನಾಡಿಸಿದ್ದಾರೆ. ಆಕೆ ಹುಣಸೆ ಮರಗಳನ್ನ ತೋರಿಸಲು ಹೋದಾಗ ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ಕೊಂಡ್ ಬೈಕ್ ನಲ್ಲಿ ಪರಾರಿಯಾಗಿದ್ದರು.
PublicNext
20/12/2024 01:49 pm