ಚಿತ್ರದುರ್ಗ: ಜಾನುವಾರುಗೆ ಚಿಕಿತ್ಸೆ ನೀಡಿ ಸರ್ಕಾರಿ ಪಶು ವೈದ್ಯೆಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಮ್ಮನಹಟ್ಟಿ ಗ್ರಾಮದಲ್ಲಿ ಘಟನೆ ಜರುಗಿದೆ.
ಲಂಚ ನೀಡಲು ಜಾನುವಾರು ಮಾಲೀಕ ನಿರಾಕರಿಸಿದ್ದಕ್ಕೆ ಅಮ್ಮನಹಟ್ಟಿ ಪಶು ವೈದ್ಯೆ ರಾಜೇಶ್ವರಿ ಜಗಳ ಮಾಡಿದ್ದಾರೆ. ಅವರು ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೌರ್ಮೆಂಟ್ ನಿಂದ ಯಾವನು ಮೆಡಿಸಿನ್ ಕೊಟ್ಟಿಲ್ಲ ದುಡ್ಡು ಕೊಡೋ ಎಂದು ವೈದ್ಯೆ ಅವಾಜ್ ಹಾಕಿದ್ದಾರೆ. ಪ್ರತೀ ಬಾರಿಯೂ ಚಿಕಿತ್ಸೆ ನೀಡಿದಾಗ ಕೂಡಾ ಹಣ ಪಡೆದಿರುವ ವೈದ್ಯೆ ರಾಜೇಶ್ವರಿ
ಈ ಹಿಂದೆ 500, 300, ರೂಪಾಯಿ ಹಣ ನೀಡಿದ್ದಾಗಿ ರೈತರು ಆರೋಪಿಸಿದ್ದಾರೆ.
ನಿಮ್ಮ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲು ನನಗೆ ರೂಲ್ಸ್ ಇಲ್ಲ. ಗೌರ್ಮೆಂಟ್ ನಿನ್ನ ಮನೆ ಬಾಗಿಲಿಗೆ ಬಂದು ಮೆಡಿಸಿನ್ ಕೊಡಲು ಸಂಬಳ ಕೊಡಲ್ಲ ಎಂದು ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
PublicNext
22/12/2024 04:39 pm