ಸಾಗರ: ತಾಲೂಕಿನ ತ್ಯಾಗರ್ತಿ ಮಾರಿಕಾಂಬಾ ದೇವಾಲಯದ ನೂತನ ಕಟ್ಟಡ ಲೋಕಾರ್ಪಣಾ ಕಾರ್ಯಕ್ರಮ ನಾಳೆ ದಿನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು ದೇವಾಲಯದ ಹೊರ ಆವರಣದಲ್ಲಿ ಕಾಲುವೆ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ಹಮೀದ್ ಖಾನ್ ಮಾತನಾಡಿ ಮುಸ್ಲಿಂ ಕಮಿಟಿ ವತಿಯಿಂದ ಊರಿನ ಮಾರಿಕಾಂಬಾ ಹಾಗೂ ದುರ್ಗಾಂಬಾ ದೇವಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ನಮ್ಮ ಊರಿನ ಸಾಂಸ್ಕೃತಿಕ, ಧಾರ್ಮಿಕ ,ಶೈಕ್ಷಣಿಕ ,ಸಾಮಾಜಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮುಸ್ಲಿಂ ಸಮುದಾಯದ ಪ್ರಮುಖರಾದ ವಹಾಬ್, ಕಮಲ್ ಖಾನ್, ಇಮಾಮ್ ಸಾಬ್, ಖಲೀಲ್ ಸಾಬ್, ಶಫೀ ,ಅಮಾನುಲ್ಲಾ ಇನ್ನಿತರರು ಇದ್ದರು.
Kshetra Samachara
22/12/2024 01:51 pm