ಶಿವಮೊಗ್ಗ: ಅಪರಾಧ ತಡೆ ಬಗ್ಗೆ ಶಿವಮೊಗ್ಗ ನಗರದ ಅಕ್ಷರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಪಶ್ವಿಮ ಸಂಚಾರ ಠಾಣೆ ಪಿಎಸ್ ಐ ತಿರುಮಲೇಶ್ ಸಂಚಾರ ನಿಯಮಗಳು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ರು. ಸಂಚಾರ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ, ರಸ್ತೆ ಸುರಕ್ಷತೆ ಮತ್ತು ಅಪಘಾತ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತೀ ನಾಗರೀಕನ ಪಾತ್ರವು ಪ್ರಮುಖವಾಗಿರುತ್ತದೆ, ಸಂಚಾರ ನಿಯಮಗಳನ್ನು ಗೌರವಿಸುವ ಹಾಗೂ ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ರಸ್ತೆ ಅಪಘಾತದಿಂದ ದೂರ ಇರಲು ಸಾಧ್ಯವಿರುತ್ತದೆ. ಯಾರೇ ಆಗಲಿ ಹೆಲ್ ಮೆಟ್ ಇಲ್ಲದೇ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಬಾರದು. ಕಾರ್ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಕುರಿತು ಪೊಲೀಸರು ಜಾಗೃತಿ ಮೂಡಿಸಿದ್ರು.
Kshetra Samachara
28/12/2024 07:59 pm