ಶಿವಮೊಗ್ಗ: ನಗರದಲ್ಲಿ ಬೈಕ್ ವೀಲಿಂಗ್ ಮಾಡಿದ್ದ ಯುವಕನೊಬ್ಬನಿಗೆ 6 ಸಾವಿರ ರೂ.ದಂಡ ವಿಧಿಸಿ, ಶಿವಮೊಗ್ಗ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಯು ನಂಬರ್ ಪ್ಲೇಟ್ ಇಲ್ಲದೇ, ನಗರದಲ್ಲಿ ಬೈಕ್ ಓಡಿಸುತ್ತಿದ್ದಾಗ ಪಶ್ಚಿಮ ಸಂಚಾರ ಠಾಣೆ ಪಿಎಸ್ಐ ತಿರುಮಲೇಶ್ ನೇತೃತ್ವದಲ್ಲಿ ತಡೆದು, ವಿಚಾರಣೆ ಮಾಡಲಾಗಿದೆ. ಈ ವೇಳೆ ಯುವಕನ ಮೊಬೈಲ್ ಪರಿಶೀಲಿಸಿದಾಗ ಬೈಕ್ ವೀಲಿಂಗ್ ಮಾಡಿದ ಮಾಡಿದ ವಿಡಿಯೋ ಚಿತ್ರೀಕರಿಸಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪತ್ತೆಯಾಗಿತ್ತು. ಆತನ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಲಯಕ್ಕೆ ಒಪ್ಪಿಸಲಾಗಿತ್ತು. ಅದರಂತೆ ನ್ಯಾಯಾಲಯ ದಂಡ ವಿಧಿಸಿ, ಆದೇಶಿಸಿದೆ.
Kshetra Samachara
28/12/2024 05:50 pm