ವೀರಾಜಪೇಟೆ: ಅರಾಯಿರ ನಾಡ್ ರ ವಾರ್ಷಿಕ ಪುತ್ತರಿ ಕೋಲಾಟ, ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡು ಸಂಪನ್ನಗೊಂಡಿತು.
ವೀರಾ ರಾಜೇಂದ್ರಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್, ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಗಿ ವಿಂಗಡಣೆಗೊಂಡು 17 ಗ್ರಾಮಗಳ ಒಕ್ಕೂಟದ ನಾಡಿನ ಗ್ರಾಮಸ್ಥರು ಪುತ್ತರಿ ಕೋಲಾಟವು ವಿರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ವಾರ್ಷಿಕ ಕೋಲಾಟ ಪ್ರದರ್ಶಿಸಲಾಯಿತು.
ಕೊಡಗಿನ ಸಂಪ್ರದಾಯಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೂಲು ಹಿಡಿದ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರಿಗೆ ಕೊಡಗಿನ ಸಾಂಪ್ರದಾಯದ ವಾಲಗವು ಸ್ವಾಗತ ಕೊರಿದವು. ಮಂದ್‌ನ ಹೃದಯ ಭಾಗದಲ್ಲಿರುವ ಆಲದ ಮರಕ್ಕೆ ಹಿರಿಯರಿಂದ ಪ್ರಥಮ ಪೂಜೆ ಸಲ್ಲಿಕೆಯಾದವು, ನಾಲ್ಕು ಭಾಗದ ಕೋಲಾಟ ಪ್ರದರ್ಶನದಲ್ಲಿ ಭಾಗಿಗಳಾಗುವವರು ಒಂದೇಢೆ ಸೇರಿ ವಾರ್ಷಿಕ ಕೋಲಾಟಕ್ಕೆ ಚಾಲನೆ ನೀಡಿದರು.
ಪೂಮಾಲೆ ಮಂದ್‌ನಲ್ಲಿ ಮೂರು ಸುತ್ತಿನ ಕೋಲಾಟ, ಎಳು ಜೋಡಿಯ ಪರಿಯಕಳಿ, ವಾಲಗತ್ತಾಟ್ ನಡೆಯಿತು. ಕೋಲಾಟದ ಪ್ರಕಾರಗಳನ್ನು ಪ್ರದರ್ಶನ ಮಾಡುವವರು ವಾಲಗ ನುಡಿಸುವವರ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತಿದ್ದರು. ಪ್ರಥಮ ಭಾರಿಗೆ ಉತ್ತಮ ಕೊಲಾಟ ಪ್ರದರ್ಶನ ನೀಡಿದ ಪಟುವಿಗೆ ರೋಲಿಂಗ್ ಟ್ರೋಫಿಯನ್ನು ಪರಿಚಯಿಸಿದರು.
ಕಬ್ಬಚ್ಚೀರ ಕಾರ್ಯಪ್ಪ ಅವರ ಜ್ಞಾಪಕಾರ್ಥ ಮಕ್ಕಳಾದ ಬೋಪಣ್ಣ ಮತ್ತು ನಂಜಪ್ಪ ಅವರು ನೀಡಿರುವ ರೋಲಿಂಗ್ ಟ್ರೋಫಿಯನ್ನು ಮಗ್ಗುಲ ಗ್ರಾಮದ ಚೋವಂಡ ನಿಖಿಲ್ ಅವರು ಪಡೆದುಕೊಂಡರು, ಪರಿಯ ಕಳಿ ಸ್ಪರ್ಧೇಯಲ್ಲಿ ಬೇಟೋಳಿ ಗ್ರಾಮದ ಬೊಪ್ಪಚಂಡ ಮಾಚಯ್ಯ ಮತ್ತು ಕಬ್ಬಚ್ಚೀರ ಮಾಚಯ್ಯ ಪ್ರಥಮ ಸ್ಥಾನ ಪಡೆದುಕೊಂಡರು.
ತ್ರೀವೆಣಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಚೌರಿ ಆಟ್ ಮತ್ತು ಬಾಲಕಿಯರಿಂದ ಉಮ್ಮತಾಟ್ ಪ್ರದರ್ಶನ ಜನಮನ್ನಣೆ ಪಡೆಯಿತು. ವಿವಿಧ ಕೋಲಾಟ ಸ್ಪರ್ಧೇಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆರಾಯಿರ ನಾಡ್ ಕೋಲ್ ಮಂದ್ ಆಯೋಜಕರ ಸಮಿತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
PublicNext
20/12/2024 12:46 pm