ಕೇರಳದ ಪಯ್ಯಾವೂರ್ ನಲ್ಲಿ ಪ್ರತೀ ವರ್ಷ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಪೂರ್ವಭಾವಿ ಸಭೆಯು ಚೆಯ್ಯಂಡಾಣೆಯಲ್ಲಿ ನಡೆಯಿತು.
ಚೆಯ್ಯಂಡಾಣೆಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ತಕ್ಕಮುಖ್ಯಸ್ಥ ಕುಟುಂಬಸ್ಥರ ಹಿರಿಯರಾದ ಮುಂಡಿಯೋಳಂಡ ತಮ್ಮಯ್ಯ ಹಾಗೂ ಬೊವ್ವೆರಿಯಂಡ ತಿಮ್ಮಯ್ಯ ನವರ ನೇತೃತ್ವದಲ್ಲಿ ಸಭೆ ನಡೆಯಿತು. ಕೇರಳದಿಂದ ಸಭೆಗೆ ಆಗಮಿಸಿದ ದೇವಸಂ ಬೋರ್ಡ್ ನ ಬಿಜು ಅವರು ಮಾತನಾಡಿ 2025ರ ಫೆಬ್ರವರಿಯಲ್ಲಿ ನಡೆಯುವ ಊಟ್ ಉತ್ಸವ ಕಳೆದ ಬಾರಿಗಿಂತ ಅತೀ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆಯುತ್ತಿದೆ. ಶಿವ ಕ್ಷೇತ್ರದಲ್ಲಿ ನೂತನ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಅನ್ನದಾನ ಕೌಂಟರ್ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಹಬ್ಬದ ಪ್ರಾರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
Kshetra Samachara
18/12/2024 04:00 pm