ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉನ್ನತ ಭಾರತ ಅಭಿಯಾನದಡಿಯಲ್ಲಿ ವಿಜ್ಞಾನ ಪ್ರಯೋಗದರ್ಶನ ಕಾರ್ಯಕ್ರಮ

ಬಜಪೆ: ಉನ್ನತ ಭಾರತ ಅಭಿಯಾನದ ಅಡಿಯಲ್ಲಿ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ನಾಲ್ಕನೇ ವರ್ಷದ "ವಿಜ್ಞಾನ ಪ್ರಯೋಗದರ್ಶನ" ಕಾರ್ಯಕ್ರಮವು ಕುಪ್ಪೆಪದವು ಸಮೀಪದ ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರದಂದು ನಡೆಯಿತು.

ಎಸ್.ಎನ್. ಎಂ. ಪಾಲಿಟೆಕ್ನಿಕ್ ಕಾಲೇಜಿನ 15 ವಿದ್ಯಾರ್ಥಿಗಳು ಹಾಗೂ 3 ಮಂದಿ ಉಪನ್ಯಾಸಕರ ತಂಡ ಕಾಲೇಜಿನಲ್ಲೇ ಸಿದ್ಧಪಡಿಸಿದ ಉಪಕರಣಗಳನ್ನು ಎನ್ ಸಿಇಅರ್ ಟಿ ಯಡಿ ಪರಿಷ್ಕೃತಗೊಂಡ ಹತ್ತನೇ ತರಗತಿಯ ಪಠ್ಯಕ್ರಮದಂತೆ ಶಾಲೆಯ ವಿದ್ಯಾರ್ಥಿಗಳಿಗೆ "ವಿಜ್ಞಾನ ಪ್ರಯೋಗ" ಗಳನ್ನು ವಿದ್ಯಾರ್ಥಿಗಳ ಮುಖೇನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವತಃ ಪ್ರಯೋಗಗಳನ್ನು ಮಾಡಲು ಅವಕಾಶ ನೀಡಲಾಯಿತು.

ಕುಪ್ಪೆಪದವು ಪ್ರೌಢಶಾಲೆಯ 45 ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಬಾಬು ಪಿ.ಎಂ. ಎಸ್. ಡಿ.ಎಂ.ಸಿ ಸದಸ್ಯ ಶೇಖ್ ಅಬ್ದುಲ್ಲಾ, ಉಪನ್ಯಾಸಕರಾದ ರಾಮ್ ಪ್ರಸಾದ್, ಸುಶಾಂತ್ , ಗೋಪಾಲಕೃಷ್ಣ, ವಿಜ್ಞಾನ ಶಿಕ್ಷಕ ಮಾರ್ಕ್ ಜೆ. ಮೆಂಡೊನ್ಸಾ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/12/2024 06:52 pm

Cinque Terre

446

Cinque Terre

0

ಸಂಬಂಧಿತ ಸುದ್ದಿ