ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಂದಲೇ ಅಪಸ್ವರ ಕೇಳಿ ಬಂದಿದೆ. ಅಶೋಕ್ ಕುಮಾರ್ ರೈಯರು ಬಿಜೆಪಿ ಸೇರುವುದು ಖಚಿತವೆಂದು ಹೇಳಿಕೆ ನೀಡಿದ್ದಕ್ಕೆ ಬೆದರಿಕೆಯೊಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಆಕ್ಷೇಪ ಎತ್ತಿದವರು. 'ಅಶೋಕ್ ರೈಯವರು ಮುಂದಿನ ಚುನಾವಣೆಗೆ ಬಿಜೆಪಿಗೆ ಸೇರುವುದು ಖಚಿತ. ಮುಂದಿನ ಚುನಾವಣೆ ವೇಳೆಗೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಆಣೆಪ್ರಮಾಣ ಮಾಡಲಿ' ಎಂದು ಹಕೀಂ ಕೂರ್ನಡ್ಕ ಸವಾಲೆಸೆದಿದ್ದರು.
ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಅಪಸ್ವರವೆತ್ತಿದ್ದಕ್ಕಾಗಿ ಹಕೀಂ ಕೂರ್ನಡ್ಕಗೆ ಜೀವ ಬೆದರಿಕೆ ಬಂದಿದೆ. ಅಶೋಕ್ ರೈ ಬೆಂಬಲಿಗವಈಶ್ವರಮಂಗಳ ಮೂಲದ ಯುವಕನೋರ್ವನು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಲಾಗಿದೆ.
'ಅಶೋಕ್ ರೈಗಳ ಬೆಂಬಲಿಗರ ಜೀವ ಬೆದರಿಕೆಗೆ ತಾನು ಕುಗ್ಗುವುದಿಲ್ಲ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದೇನೆ' ಎಂದ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಹಕೀಂ ಕೂರ್ನಡ್ಕ
ಅಶೋಕ್ ರೈಗಳು ಪುತ್ತೂರಿನ ರಸ್ತೆಯನ್ನೇ ಸರಿಪಡಿಸುತ್ತಿಲ್ಲ. ಮೂಲ ಸೌಕರ್ಯ ಒದಗಿಸದ ಬಗ್ಗೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚಕಾರವೆತ್ತಿದ್ದೇನೆ. ಆದರೆ ಶಾಸಕರು ಅವರ ಸಂಸ್ಕೃತಿಯನ್ನು ತೋರಿಸಿ, ಅಭಿವೃದ್ಧಿ ಮಾಡದ ಬಗ್ಗೆ ಮಾತಾಡಿದ್ದಕ್ಕೆ, ಅವರ ಬೆಂಬಲಿಗರು ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಇಳಿಯುತ್ತಾರೆ. ಪುತ್ತೂರು ಶಾಸಕರು ಪಾರ್ಟ್ ಟೈಂ ರಾಜಕಾರಣಿ. ರಾಜಕೀಯದಲ್ಲಿ ಪಳಗಿದವರಲ್ಲ. ಕೇವಲ ಮೆಡಿಕಲ್ ಕಾಲೇಜು, ತುಳುವಿನ ಬಗ್ಗೆ ಸದನದಲ್ಲಿ ಮಾತಾಡಿದರೆ ಆಗುವುದಿಲ್ಲ. ಅದರ ಬದಲು ಸಿದ್ದಾರಮಯ್ಯ, ಡಿಕೆಶಿ ಅವರಲ್ಲಿ ಒತ್ತಾಯ ಮಾಡಿಕೊಂಡು ಪುತ್ತೂರನ್ನು ಅಭಿವೃದ್ಧಿಪಡಿಸಲಿ. ಅವರು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ನೋಡಿ ಕಲಿಯಲಿ. ಅವರು ಮುಸ್ಲಿಂ ಆಗಲಿ ಬೇರೆ ಯಾವುದೇ ಜಾತಿಯನ್ನಾಗಲಿ ಭೇದ-ಭಾವ ಮಾಡದೆ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಓರ್ವ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಿಗೆ ಜೀವ ಬೆದರಿಕೆ ಒಡ್ಡುತ್ತಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೇನೆ ಎಂದು ಹಕೀಂ ಕೂರ್ನಡ್ಕ ಹೇಳಿದ್ದಾರೆ.
PublicNext
19/12/2024 03:38 pm