ಉಡುಪಿ: ಉಡುಪಿ ಜಿಲ್ಲಾ ಪೊಲೀಸರು ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಥಾ ಮಾಡಿದರು. ಈ ಮೂಲಕ ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸಿದರು. ನಗರದ ಬೋರ್ಡ್ ಹೈಸ್ಕೂಲು ಮುಂಭಾಗದಲ್ಲಿ ಜಾಥಾ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿದ್ದರು. ನಗರದ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಭಾಗಿಯಾಗಿ ಜನಕ್ಕೆ ಮಾಹಿತಿಗಳನ್ನು ನೀಡಿದರು. ನೂಕುನುಗ್ಗಲಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಬೇಕು, ಮೈಮರೆಯಬಾರದು.
ಮನೆಯನ್ನು ಬಿಟ್ಟು ಹೋಗುವಾಗ ಬೆಲೆಬಾಳುವ ಚಿನ್ನಾಭರಣ, ನಗದನ್ನು ಸುರಕ್ಷಿತ ಲಾಕರ್ ನಲ್ಲಿ ಇಡಬೇಕು, ದ್ವಿಚಕ್ರ ವಾಹನವನ್ನು ಲಾಕ್ ಮಾಡುವ ಜೊತೆ ಹ್ಯಾಂಡ್ ಲಾಕ್ ಮಾಡಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯ್ತು.
Kshetra Samachara
19/12/2024 01:22 pm