ಕುಂದಾಪುರ: ಕುಂದಾಪುರ ತಾಲೂಕಿನ ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ ಮಾಡುತ್ತಿದ್ದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ-ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎಂಬವರ ಮನೆಯ ಅಂಗಳದಲ್ಲಿ ಚಿರತೆ ಸಂಚಾರ ನಡೆಸಿದೆ.ಮನೆ ಮಂದಿ ಬೆಳಿಗ್ಗೆ ಸಿಸಿ ಕ್ಯಾಮೆರಾ ನೋಡ ಹೌಹಾರಿದ್ದಾರೆ.ಇದರಿಂದ ಮನೆಯವರಲ್ಲದೆ ನೆರೆ-ಹೊರೆಯವರೂ ಆತಂಕಗೊಂಡಿದ್ದಾರೆ.
ಈ ಚಿರತೆಯು ಸಾಕು ನಾಯಿಯ ಬೇಟೆಗಾಗಿ ಬಂದಿದ್ದು ಅದೃಷ್ಟವಶಾತ್ ಅಂಗಳದಲ್ಲಿ ನಾಯಿ ಇರಲಿಲ್ಲ.
ಪದೇಪದೇ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
18/12/2024 03:48 pm