ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು : ಬೈಕ್ - ಬಸ್ ನಡುವೆ ಡಿಕ್ಕಿ, ಸವಾರ ಮೃತ್ಯು

ಪುತ್ತೂರು: ಬೈಕ್ ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಮುರ ಎಂಬಲ್ಲಿ ನಡೆದಿದೆ.

ಮೃತರನ್ನು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಬನಾರಿ ರಾಮನಗರ ನಿವಾಸಿ ಅಬ್ದುಲ್ ಕುಂಞ (65) ಎಂದು ಗುರುತಿಸಲಾಗಿದೆ.

ಇವರು ತನ್ನ ಬೈಕ್‌ನಲ್ಲಿ ಔಷಧಿಗೆಂದು ಮುರದಲ್ಲಿರುವ ಮೆಡಿಕಲ್‌ವೊಂದಕ್ಕೆ ಆಗಮಿಸಿ ಔಷಧಿ ಪಡೆದುಕೊಂಡು ಹಿಂದಿರುಗಿ ಪಡೂರಿನತ್ತ ತೆರಳುತ್ತಿದ್ದಾಗ ಮುಂಭಾಗದಿಂದ ಆಗಮಿಸಿದ ಪುತ್ತೂರು-ಸ್ಟೇಟ್‌ ಬ್ಯಾಂಕ್ ಸಂಚಾರದ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಅಬ್ದುಲ್ ಕುಂಣಿಯವರನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಸಂಪೂರ್ಣ ಒಳನುಗ್ಗಿದೆ.ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

20/12/2024 09:28 am

Cinque Terre

318

Cinque Terre

0

ಸಂಬಂಧಿತ ಸುದ್ದಿ