ಬಜಪೆ: ಬಜಪೆ ಜಂಕ್ಷನ್ ನಿಂದ ಕೈಕಂಬಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಬಜಪೆ ಜಂಕ್ಷನ್ ನಲ್ಲಿ ಹೊಂಡಗಳು ಉಂಟಾಗಿ ತಿಂಗಳುಗಳು ಕಳೆದು ಹೋಗಿದ್ದು, ವಾಹನಗಳ ಸವಾರರು ದಿನಂಪ್ರತಿ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಇದೀಗ ರಾಜ್ಯ ಹೆದ್ದಾರಿಯ ಹೊಂಡಗಳಿಗೆ ತೇಪೆ ಹಾಕುವ ಕಾರ್ಯವು ನಡೆಯುತ್ತಿದ್ದು ,ವಾಹನಗಳ ಸವಾರರು ನಿಟ್ಟುಸಿರು ಬಿಡುವಂತಾಗಿದೆ.ಅಲ್ಲದೆ ವಾಹನಗಳ ಸವಾರರಿಗೆ ರಾಜ್ಯ ಹೆದ್ದಾರಿಯಲ್ಲಿನ ಹೊಂಡಗಳಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡ ಹೆದ್ದಾರಿ ಇಲಾಖೆ ಹೆದ್ದಾರಿಯಲ್ಲಿನ ಹೊಂಡಗಳಿಗೆ ತೇಪೆ ಹಾಕುವ ಕಾರ್ಯವನ್ನು ಮಾಡಿದೆ.
Kshetra Samachara
19/12/2024 04:21 pm