ಬ್ರಹ್ಮಾವರ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಂಡ
ದೂಪದಕಟ್ಟೆ ಹೊನ್ನಾಳ ರಸ್ತೆಯನ್ನು ಭಾನುವಾರ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಬಹುವರ್ಷಗಳ ಬೇಡಿಕೆಯಾಗಿದ್ದ ದೂಪದಕಟ್ಟೆ ಹೊನ್ನಾಳ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಕೃಷಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಲಾಗಿದೆ ಎಂದರು.
ಹಾರಾಡಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖರಾದ ರಾಜೀವ್ ಕುಲಾಲ್, ಬೈಕಾಡಿ ಸುಪ್ರಸಾದ ಶೆಟ್ಟಿ, ಜ್ಞಾನ ವಸಂತ ಶೆಟ್ಟಿ, ನಿಶಾನ್ ರೈ, ವಸಂತಿ ಸತೀಶ್, ಕರುಣಾಕರ, ರಾಜೇಶ್ ಶೆಟ್ಟಿಬಿರ್ತಿ, ಎಸ್.ನಾರಾಯಣ, ನಿತ್ಯಾನಂದ ಬಿ.ಆರ್, ಗಣೇಶ್ ಶೆಟ್ಟಿ, ಅರುಣ್ ಭಂಡಾರಿಬೈಕಾಡಿ, ಚಂದ್ರಶೇಖರ್, ಪ್ರದೀಪ್ ಕುಂದರ್, ಸಚಿನ್ ಪೂಜಾರಿ, ಸುಜಾತ ಪೂಜಾರಿ, ಉಷಾ ಉಪಸ್ಥಿತರಿದ್ದರು.
Kshetra Samachara
19/12/2024 06:25 pm