ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಅಂತಿಮ ಸ್ಪರ್ಶ

ಮಂಡ್ಯ: ಈ ಹಿಂದೆ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿಂದಿಕ್ಕುವಂತೆ ನಡೆಯಲಿದೆ ಮಂಡ್ಯದಲ್ಲಿ‌ ನಡೆಯಲಿರುವ 87ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರೆ‌ ತಪ್ಪಾಗಲಾರದು.

ಸುಮಾರು ಒಂದು ತಿಂಗಳಿನಿಂದ ನಡೆದ‌ ಸಿದ್ಧತೆ ಅಂತಿಮ ಸ್ಪರ್ಶ ನೀಡುವ ಹಂತಕ್ಕೆ ಬಂದಿದೆ.

ಸಮ್ಮೇಳನಕ್ಕೆ ಕೆಲವೇ ದಿನ ಬಾಕಿ ಇದ್ದು, ಸಕಲ ಸಿದ್ಧತೆಗೆ ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ.

ಈ ಸಮ್ಮೇಳನಕ್ಕೆ ಹೊರ ಜಿಲ್ಲೆ, ರಾಜ್ಯ, ದೇಶ-ವಿದೇಶಗಳಿಂದ ಜನರು ಬರುವ ನಿರೀಕ್ಷೆ ಇದ್ದು, ಸುಮಾರು ಒಂದು ಲಕ್ಷ ಜನ ಪ್ರಥಮ ದಿನದ ಮೆರವಣಿಗೆಯಲ್ಲಿ ಸೇರಲಿದ್ದಾರೆ.

ಉಚಿತ ಸಾರಿಗೆ ವ್ಯವಸ್ಥೆ: ಮಂಡ್ಯ ಜಿಲ್ಲೆಯ ಏಳು ತಾಲ್ಲೂಕಿನಿಂದ ಉಚಿತ ಸಾರಿಗೆ‌ ವ್ಯವಸ್ಥೆ ಮಾಡಲಾಗಿದ್ದು, ನಗರದ‌ ಎಲ್ಲಾ‌ ಸ್ಥಳಗಳಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

Edited By : Shivu K
PublicNext

PublicNext

18/12/2024 09:34 pm

Cinque Terre

28.33 K

Cinque Terre

0

ಸಂಬಂಧಿತ ಸುದ್ದಿ