ಮಂಡ್ಯ; ಮರದ ಎತ್ತಿನಗಾಡಿಯಲ್ಲಿ ಸುಮಾರು 50 ಕಿ.ಮೀ ಸಾಗಿ ಸಾಹಿತ್ಯ ಸಮ್ಮೇಳನಕ್ಕೆ ಬಂದ ಪ್ರಗತಿ ಪರ ರೈತ ದಂಪತಿ ಇಂದು ಮಂಡ್ಯದ ಸಂಜಯ ವೃತ್ತದಲ್ಲಿ ಎಲ್ಲರ ಗಮನಸೆಳೆದ ಪ್ರಸಂಗ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಸ್ತಾಲಾಘನ ಮಾಡುವ ಮೂಲಕ ರೈತ ದಂಪತಿಯನ್ನು ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತಿಸಿದ್ರು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೊಕಿನ ಹೊಣಕೆರೆ ಹೊಬಳಿ ಮರಡಿಪುರ ಗ್ರಾಮದ ಸಂತೋಷ್ ತಿಮ್ಮೇಗೌಡ ಎಂಬ ವ್ಯಕ್ತಿ ತಮ್ಮ ಹಳೇಯಕಾಲದ ಮರದಗಾಡಿ ಯಲ್ಲಿ ತನ್ನ ಹೆಂಡತಿ ಪುಟ್ಟ ಮಗಳೊಂದಿಗೆ ಸುಮಾರು 50 ಕಿಮೀ ದೂರದಿಂದ ಬಂದಿದ್ರು,
ಬೆಳಿಗ್ಗೆ ಏಳುಗಂಟೆಗೆ ತಮ್ಮ ಗ್ರಾಮ ಮರಡಿಪುರ ಬಿಟ್ಟು ರಾತ್ರಿ ಏಳಕ್ಕೆ ಮಂಡ್ಯ ತಲುಪಿದ ರೈತ ಮಾದ್ಯಮದವ ರೊಂದಿಗೆ ಮಾತನಾಡಿದ ಪರಗತಿ ಪರ ರೈತ ತಾನು ಪ್ರತಿನಿತ್ಯ ವ್ಯಸಾಯಕ್ಕೆ ತನ್ನ ಎತ್ತಿನಗಾಡಿಯನ್ನ ಬಳಸುತ್ತಿದ್ದು, ತನ್ನ ಮಗಳು ಹುಟ್ಟಿದಾಗ ಹೆಂಡತಿಯನ್ನ ತವರಿನಿಂದ ಕರೆತಂದಿದ್ದು ಇದೇ ಗಾಡಿಯಲ್ಲಿ ಅಂತ ಹೆಮ್ಮೆಯಿಂದ ಹೇಳ್ತಾರೆ.
ಹೀಗೆ ಆಧುನಿಕತೆಗೆ ಮಾರಿಹೋಗದೆ, ಸಾಂಪ್ರದಾಯಕ ವ್ಯವಸಾಯದಲ್ಲಿ ತನ್ನನ್ನು ತೊಡಗಿಸಿಕೊಂಡು ಅದರಲ್ಲೇ ಸಂತೋಷಪಡುತ್ತಿರುವ ಸಂತೋಷ್ ತಿಮ್ಮೇಗೌಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಎನ್ನಬಹುದು.
PublicNext
20/12/2024 11:38 am