ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಪ್ಪೊತ್ತಿಗೆ ಲಕ್ಷ ಜನರಿಗೆ ಭೋಜನ ವ್ಯವಸ್ಥೆ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ಸ್ವಾದಿಷ್ಟ ಭೋಜನ ಉಣ ಬಡಿಸಲಾಗುತ್ತದೆ‌.

ಮಂಡ್ಯ ಅಂದ್ರೆ ಕೇಳ ಬೇಕೇ? ಅರ್ಧ ರಾತ್ರಿಲಿ ಮನೆಗೆ‌ ಬಂದ್ರೂ ಊಟ‌ ಮಾಡಿ ಅಂತ ಹೇಳೋ ಜನ. ಹೀಗಿರೊವಾಗ ಸಾಹಿತ್ಯ ಸಮ್ಮೇಳನಕ್ಕೆ‌ ಬಂದವರನ್ನು ಬರೀ ಹೊಟ್ಟೆಯಲ್ಲಿ ಕಳುಹಿಸುತ್ತಾರಾ? ಸಿದ್ಧತೆ ಭರದಿಂದ ನಡೀತಾ ಇದೆ ಭೂರೀ ಭೋಜನದ್ದು.

ಡಿಸೆಂಬರ್ 20ರಂದು ಸಮ್ಮೇಳನದ ಉದ್ಘಾಟನೆ ದಿನದ ಮೆನು ಹೀಗಿದೆ... ಒಂದು ಲಕ್ಷ ಜನಕ್ಕೆ ಇಡ್ಲಿ ವಡೆ ಚಟ್ನಿ ಸಾಂಬಾರ್. ಇದ್ರ ಜೊತೆಗೆ ಮೈಸೂರ್ ಪಾಕ್, ಅದೇ ದಿನ ಮಧ್ಯಾಹ್ನ ಜೋಳದ ರೊಟ್ಟಿ, ಚಟ್ನಿ ಪುಡಿ ಎಣ್ಗಾಯಿ ಅನ್ನ ಸಾಂಬಾರ್ ಮತ್ತೆ ಅದೇ ದಿನ ರಾತ್ರಿ ಒಂದು ಅವರೇ ಕಾಳು ಬಾತ್ ಅನ್ನ ಸಾಂಬಾರ್ ಪೂರಿ ಸಾಗು ಕೊಡಲಾಗುತ್ತೆ ಅಂತಾರೆ‌ ಅಡಿಗೆ ಗುತ್ತಿಗೆದಾರ ಸಂದೀಪ್.

ಸಮ್ಮೇಳನಕ್ಕೆ ಬರುವವರಿಗೆಲ್ಲ ಒಂದೇ ಮೆನು ಆಗಿದೆ. ಆದ್ರೆ, ಬೇರೆ ಬೇರೆ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಅಂತಾರೆ‌ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ.

Edited By : Manjunath H D
PublicNext

PublicNext

18/12/2024 10:48 pm

Cinque Terre

26.2 K

Cinque Terre

0

ಸಂಬಂಧಿತ ಸುದ್ದಿ