ಮಂಡ್ಯ: ಕಳವು ಮಾಡಲು ಬಂದು ಮನೆ ಮಾಲೀಕನ ಕೊಲೆ ಮಾಡಿದ ಖತರ್‌ನಾಕ್ ದರೋಡೆಕೋರರ ಗ್ಯಾಂಗ್ ಸಿಕ್ಕಿಬಿದ್ದಿದೆ. ಈ ಘಟನೆ ಮಂಡ್ಯಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಜರುಗಿದೆ.
ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಒಂಟಿ ಮನೆ ಮಾಲೀಕ ರಮೇಶ್ ಎಂಬುವವರ ಮಗ ಕಾಳ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಮನೆ ಮಾಲೀಕ ಕಾಳ ಕೊಲೆ ಯಾಗಿದ್ದಾನೆ. ಅವರ ಪತ್ನಿ ಯಶೋಧ ಅದೃಷ್ಟವಶಾತ್ ಪಾರಾಗಿದ್ದಾರೆ. ಮನೆಯಲ್ಲಿ ಸಿಕ್ಕಿ ಬಿದ್ದ ಕಳ್ಳರಿಗೆ ಸಾರ್ವಜನಿಕರು ದಿಗ್ಭಂದನ ಹಾಕಿದ್ದಾರೆ.
ಕ್ಯಾತನಹಳ್ಳಿ ರಮೇಶ ಎಂಬುವವರ ಮಗ ಕಾಳ ಮನೆಗೆ ನುಗ್ಗಿ ಕಳವು ಮಾಡಲು ಶನಿವಾರ ಸಂಜೆ ನುಗ್ಗಿದ ದರೋಡೆಕೋರರ ಗುಂಪೊಂದು ಮರ ಕೊಯ್ಯುವ ಮಿಷಿನ್‌ನಿನಿಂದ ಮನೆ ಬಾಗಿಲು ಕಟ್ ಮಾಡಿ ಒಳನುಗ್ಗಿದ್ದಾರೆ.
ಎದುರಿಗೆ ಬಂದ ಮನೆ ಮಾಲೀಕನ ಪತ್ನಿ ಯಶೋಧರಿಗೆ ಹೊಡೆದಿದ್ದು ಅವರು ಕೆಳಗೆ ಬಿದ್ದತಕ್ಷಣ ಸಾವನ್ನಪ್ಪಿದ್ದಾರೆ ಅಂತ ತಿಳಿದು ಒಳಹೊಕ್ಕಿದ್ದಾರೆ ತಕ್ಷಣ ಎಚ್ಚೆತ್ತ ಯಶೋಧ ಹೊರಕ್ಕೆ ಬಂದು ಹೊರಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ ಇದರಿಂದ ಕೊಪಗೊಂಡ ದರೋಡೆಕೋರರ ಗುಂಪು ಮನೆ ಒಳಗಿದ್ದ ಮಾಲೀಕನನ್ನು ಮನ ಬಂದಂತೆ ಥಳಿಸಿ ಕೊಲೆ ಮಾಡಿದ್ದು ಬಾಗಿಲು ಒಡೆದುಕೊಂಡು ಓಡಿ ಹೋಗಿದ್ದಾರೆ.
ಈ ವೇಳೆ ಯಶೋಧ ಕೂಗಿಕೊಂಡಾಗ ಅಲ್ಲಿಗೆ ಬಂದ ಸಾರ್ವಜನಿಕರು ದರೋಡೆಕೋರರ ಬೆನ್ನು ಹತ್ತಿದ್ದು ಪ್ರಯೋಜನ ವಾಗಿಲ್ಲ. ಆದರೆ ಒಬ್ಬ ದರೋಡೆ ಕೋರ ಮನೆಯೊಗಳಗೇ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಕಳ್ಳ ಮನೆಯೊಳಗೇ ಇದ್ದು ಸಾರ್ವಜನಿಕರು ಕಳ್ಳನಿಗೆ ಮನೆಯಿಂದ ಹೋಗದಂತೆ ದಿಗ್ಬಂಧನ ಹಾಕಿದ್ದಾರೆ. ಸ್ಥಳಕ್ಕೆ ಪಾಂಡವಪುರ ಪೊಲೀಸರು ಧಾವಿಸಿದ್ದಾರೆ.
PublicNext
21/12/2024 10:10 pm