ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಕಟ್ಟಿನಕೆರೆ ಮಾರುಕಟ್ಟೆಯ ದಿನಸಿ ಅಂಗಡಿ ಬೀಗ ಮುರಿದು ಕಳ್ಳತನ

ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆಯ ದಿನಸಿ ಅಂಗಡಿಯ ಬೀಗ ಮುರಿದು ನಗದು ಕಳ್ಳತನ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸಂಗಾತಿ ಪ್ರಾವಿಜನ್ ಸ್ಟೋರ್ ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಂಜೆ ವ್ಯಾಪಾರ ಎಲ್ಲಾ ಮುಗಿದ ನಂತರ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದ ವೇಳೆ ಕೈ ಚಳಕ ತೋರಿರುವ ಕಳ್ಳರು ಲಕ್ಷಾಂತರ ರೂಪಾಯಿ ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.

ಈ ಬಗ್ಗೆ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, ನಿನ್ನೆ ಅಂಗಡಿ ವ್ಯಾಪಾರ ಮುಗಿದ ನಂತರ ರಾತ್ರಿ 9 ಗಂಟೆಗೆ ಮನೆಗೆ ತೆರಳಿದ್ದು ಬೆಳಿಗ್ಗೆ ಎಂದಿನಂತೆ 7 ಗಂಟೆಗೆ ಬಂದು ನೋಡಲಾಗಿ ಅಂಗಡಿಯ ಒಂದು ಬದಿಯ ಬೀಗ ಒಡೆದು ಹಣ ಕಳ್ಳತನ ಮಾಡಿದ್ದಾರೆ ಎಂದರು.

ಈ ಹಿಂದೆ ಯಾವತ್ತೂ ಈ ರೀತಿಯ ಘಟನೆ ನಡೆದಿರಲಿಲ್ಲ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದ್ದು ಅಂಗಡಿಯಲ್ಲಿ ಇಟ್ಟಿದ್ದ 1.5 ಲಕ್ಷ ನಗದು ಕಳ್ಳತನವಾಗಿದೆ. ಈ ಬಗ್ಗೆ ಈಗಾಗಲೇ ಹಾಸನ ನಗರ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

Edited By : Shivu K
PublicNext

PublicNext

18/12/2024 09:17 pm

Cinque Terre

21.85 K

Cinque Terre

0

ಸಂಬಂಧಿತ ಸುದ್ದಿ