ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳೆನರಸೀಪುರ: ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಹೊಳೆನರಸೀಪುರ: ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವನೂರು ಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಚಿರತೆ ಸೆರೆಯಾಗಿದೆ.ಕಳೆದ 2-3 ತಿಂಗಳಿಂದ ಚಿರತೆ ಈ ಗ್ರಾಮದಲ್ಲಿ ಓಡಾಟ ನಡೆಸಿತ್ತು. ಕುರಿ, ನಾಯಿಗಳನ್ನು ಹೊತ್ತೊಯ್ದು ಜನರ ನಿದ್ದೆಗೆಡಿಸಿತ್ತು. ಅರಣ್ಯ ಇಲಾಖೆ ಚಿರತೆಯ ಸೆರೆಗಾಗಿ ಬೋನ್ ಇಟ್ಟಿದ್ದರು. ಈ ವೇಳೆ ರಾತ್ರಿ ನಾಯಿಯನ್ನು ತಿನ್ನಲು ಬಂದು ಸೆರೆಯಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Edited By : Somashekar
PublicNext

PublicNext

21/12/2024 03:30 pm

Cinque Terre

13.45 K

Cinque Terre

0