ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು: ಯಗಚಿ ಹಳೆಯ ಸೇತುವೆ ಉಳಿಸಲು - ಕರವೇ ಹೋರಾಟ

ಬೇಲೂರು: ಶಿಥಿಲಗೊಂಡಿರುವ ಇಲ್ಲಿನ ಯಗಚಿ ನದಿಯ ಹಳೇ ಸೇತುವೆ ದುರಸ್ತಿಗೆ ಆಗ್ರಹಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೇತುವೆ ಮೇಲೆ ಸಂಚಾರ ನಿಷೇಧಿಸಿ, ಅಡುಗೆ ತಯಾರಿಸುವ ಮೂಲಕ ಪ್ರತಿಭಟಿಸಿದರು.

ಬೇಲೂರು ಪಟ್ಟಣ ಬಳಿಯ ಯಗಚಿ ನದಿಯ ಹಳೇ ಸೇತುವೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರಲ್ಲದೆ, ಸೇತುವೆಯ ಮೇಲೆ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಿದರು.

ಈ ಸಂದರ್ಭ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, 150 ವರ್ಷ ಹಳೆಯದಾದ ಅಪರೂಪದ ಸೇತುವೆ ಇಂದು ಅವನತಿಯತ್ತ ಸಾಗುತ್ತಿದೆ. ಪ್ರತಿವರ್ಷ ಕರವೇ ಘಟಕದಿಂದ ಪ್ರತಿಭಟಿಸಿ ಎಚ್ಚರಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆ ವೇಳೆ ಸ್ಥಳಕ್ಕಾಗಮಿಸುವ ಅಧಿಕಾರಿಗಳು ಏನಾದರೊಂದು ಸಬೂಬು ಹೇಳಿ ಶೀಘ್ರವೇ ಕೆಲಸ ಆರಂಭಿಸುವ ಭರವಸೆ ನೀಡಿ ತೆರಳುತ್ತಾರೆ ಹೊರುತು ದುರಸ್ತಿಗೆ ಮುಂದಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆಯ ಎರಡು ಬದುಗಳಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ಕಲ್ಲುಗಳು ಉದುರುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಬೇಲೂರು ಶಾಸಕರು ಯಗಚಿ ಹಳೆಯ ಸೇತುವೆ ತೆರವುಗೊಳಿಸುವ ಬಗ್ಗೆ ಮುಂದಾದರೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಸೂಕ್ತ ಅನುದಾನ ಬಿಡುಗಡೆ ಮಾಡಿ ಮೇಲ್ನೋಟಕ್ಕೆ ಚಂದ ಕಾಣುವಂತೆ ಡಾಂಬರ್ ಹಾಕಿಸಿ, ಗಿಡಗಂಟಿಗಳನ್ನು ಕತ್ತರಿಸಿದ್ದರು. ಆದರೆ ಕೆಲದಿನಗಳ ನಂತರ ಗಿಡಗಳು ಮರಗಳಾಗಿ ಬೆಳೆದಿವೆ. ಡಾಂಬರ್ ಕಿತ್ತು ಗುಂಡಿ ಬಿದ್ದಿದೆ. ಈ ಸೇತುವೆ ಮೇಲೆ ಭಾರೀ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಶಾಸಕರಿಗಾಗಲಿ, ಸೇತುವೆ ದುಸ್ಥಿತಿ ಕಣ್ಣಿಗೆ ಕಂಡಿಲ್ಲವೆ ಎಂದು ಪ್ರಶ್ನಿಸಿದರು.

ಪ್ರತಿಭಟನೆ ವೇಳೆ ಕರವೇ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್,

ಜಿಲ್ಲಾ ಉಪಾಧ್ಯಕ್ಷ ಸೀತಾರಾಂ, ಉಪಾಧ್ಯಕ್ಷ ಹನೀಫ್. ಗೌರವಾಧ್ಯಕ್ಷ ತಾರಾನಾಥ, ಕುಮಾರ್, ನಗರಾಧ್ಯಕ್ಷ ಮೋಹನಗೌಡ, ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಿ, ಗಂಗರಾಜು, ಬಳ್ಳೂರು ಮದನ್, ಪ್ರಸನ್ನ, ಮಹೇಶ್, ಸೋಮಶೇಖರ ಇನ್ನೂ ಮುಂತಾದವರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

18/12/2024 05:34 pm

Cinque Terre

320

Cinque Terre

0