ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಮನೆಗೆ ನುಗ್ಗಿ 15 ಲಕ್ಷ ನಗದು ಸಹಿತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಚೋರರ ಪಾಲು

ಹಾಸನ: ಮನೆಗೆ ನುಗ್ಗಿ 15 ಲಕ್ಷ ರೂಪಾಯಿ ನಗದು ಸೇರಿದಂತೆ ಚಿನ್ನಾಭರಣವನ್ನು ಖದೀಮರು ದೋಚಿದ ಘಟನೆ ಹಾಸನ ನಗರದ ಕೆಎಚ್ ಬಿ ಕಾಲೋನಿಯಲ್ಲಿ ನಡೆದಿದೆ.

ಕೆಎಚ್‌ಬಿ ಕಾಲೋನಿ ನಿವಾಸಿ ಸಚಿನ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ 15 ಲಕ್ಷ ರೂಪಾಯಿ ನಗದು ಹಾಗೂ 130 ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಲಪಟಾಯಿಸಿರುವ ಚೋರರ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,15 ಲಕ್ಷ ರೂಪಾಯಿ ನಗದು ಹಾಗೂ 7 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Edited By : Shivu K
PublicNext

PublicNext

14/12/2024 10:18 pm

Cinque Terre

24.88 K

Cinque Terre

0

ಸಂಬಂಧಿತ ಸುದ್ದಿ