ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ತಹಶೀಲ್ದಾರ್ ‌ಕಚೇರಿಯಲ್ಲೆ ಜಮೀನು ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ

ಹಾಸನ : ಜಮೀನು ವಿಚಾರಕ್ಕಾಗಿ ಇಬ್ಬರು ವ್ಯಕ್ತಿಗಳು ಅರಕಲಗೂಡು ತಹಶೀಲ್ದಾರ್ ‌ಕಚೇರಿಯಲ್ಲೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಭಾಸ್ಕರ್ ಹಾಗೂ ಮಂಜು ಎಂಬಾತರ ನಡುವೆ ಜಮೀನಿನ ವಿಚಾರಕ್ಕಾಗಿ ಸುಮಾರು ದಿನಗಳಿಂದ ಜಗಳವಿದ್ದು, ಇಂದು ತಹಶೀಲ್ದಾರ್ ‌ಕಚೇರಿಗೆ ಬಂದಾಗ ಮಾತಿಗೆ ಮಾತು ಬೆಳೆದು ಏಕಾಏಕಿ ಹೊಡೆದಾಡಿದ್ದಾರೆ.

ಸದ್ಯ ಜಗಳ ನಡೆದ ಬಳಿಕ ರೆವಿನ್ಯೂ ಅಧಿಕಾರಿಗಳು ಇವರಿಬ್ಬರ ಮೇಲೂ ಕ್ರಮ ಕೈಗೊಳ್ಳಲು ದೂರು ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಕರೆದ್ಯೊಯ್ದಿದ್ದಾರೆ. ಈ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

14/12/2024 10:05 pm

Cinque Terre

30.16 K

Cinque Terre

0

ಸಂಬಂಧಿತ ಸುದ್ದಿ