ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಹೆಬ್ರಿ ಪೊಲೀಸ್ ಠಾಣೆಗೆ ಮಾಹೆ ವತಿಯಿಂದ ಕಂಪ್ಯೂಟರ್ ಸಿಸ್ಟಮ್ಸ್ ಕೊಡುಗೆ

ಹೆಬ್ರಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಹೆಬ್ರಿ ಟೌನ್ ಪೊಲೀಸ್ ಠಾಣೆಗೆ ತಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಸಮುದಾಯ ಸುರಕ್ಷತೆಯನ್ನು ಸುಧಾರಿಸಲು 5 ಸುಧಾರಿತ ಕಂಪ್ಯೂಟರ್ ಸಿಸ್ಟಮ್‌ ಮತ್ತು 2 ಪ್ರಿಂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಡಾ.ಎಚ್.ಎಸ್. ಬಲ್ಲಾಳ್, ಮಾಹೆಯ ಪ್ರೊ-ಚಾನ್ಸೆಲರ್ ಅವರು ಮಾತನಾಡಿ, ಈ ಕೊಡುಗೆಯು ಆಧುನಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಹಾಗೂ ಸ್ಥಳೀಯ ಕಾನೂನು ಜಾರಿಯನ್ನು ಬೆಂಬಲಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂಪನ್ಮೂಲಗಳು ಅಂಕಿ ಅಂಶಗಳ ನಿರ್ವಹಣೆ ಮತ್ತು ಸೈಬರ್-ಸಂಬಂಧಿತ ಕಾರ್ಯಗಳಲ್ಲಿ ಅವರ ಪ್ರಯತ್ನಗಳನ್ನು ಹೆಚ್ಚಿಸುತ್ತವೆ ಎಂದು ನಾವು ಭಾವಿಸುತ್ತೇವೆ ಎಂದರು.

ಸಬ್ ಇನ್ಸ್ ಪೆಕ್ಟರ್ ಮಹೇಶ್ ಟಿ.ಎಂ. ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

18/12/2024 05:22 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ