ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ಉದ್ಯೋಗದ ಜತೆಗೆ ಧರ್ಮ ಕಾರ್ಯವೂ ಮುಖ್ಯ"- ಶ್ರೀ ವಿಧು ಶೇಖರಭಾರತೀ ಸ್ವಾಮೀಜಿ

ಬ್ರಹ್ಮಾವರ: ಸಕ್ಕಟ್ಟು ಶ್ರೀ ಉಮಾಮಹೇಶ್ವರ ವಿಷ್ಣುಮೂರ್ತಿ ದೇವರ ನೂತನ ಶಿಲಾಮಯ ಪ್ರಾಸಾದಗಳ ಶಿಲಾನ್ಯಾಸ ಬುಧವಾರ ಶೃಂಗೇರಿ ಶಾರದಾ ಪೀಠದ ಶ್ರೀ ವಿಧು ಶೇಖರಭಾರತೀ ಸ್ವಾಮೀಜಿಯವರಿಂದ ಜರುಗಿತು.

ಬಳಿಕ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿ ಮಾತನಾಡಿ, ಬಿಲಿಷ್ಠ ರಾಜ- ಮಹಾರಾಜರುಗಳು ಕೂಡಾ ಅವರವರ ಶಕ್ತಿಗೆ ಅನುಸಾರವಾಗಿ ಧರ್ಮ ಕಾರ್ಯ, ದೇವತಾ ಕಾರ್ಯ ಜೊತೆಗೆ ಬೃಹತ್ ದೇವಸ್ಥಾನಗಳನ್ನು ನಿರ್ಮಿಸಿ ಮುಂದಿನ ಜನಾಂಗಕ್ಕೆ ಧಾರ್ಮಿಕವಾಗಿ ಮುಂದುವರಿಯುವಂತೆ ಮಾಡಿದ್ದಾರೆ ಎಂದರು.

ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಆಡಳಿತ ಮೊಕ್ತೇಸರ ರಘುರಾಮಯ್ಯ ಮತ್ತು ಮನೆಯವರು ಗುರುಪಾದ ಪೂಜೆ ನಡೆಸಿದರು. ಬಳಿಕ ಗ್ರಾಮದ ಪ್ರತಿಯೊಬ್ಬರೂ ಗುರುಗಳಿಂದ ಫಲ ಮಂತ್ರಾಕ್ಷತೆ ಪಡೆದರು. ಪುರಾತನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಪ್ರಾಂತ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರಿ, ಲೋಕೇಶ್ ಅಡಿಗ, ಪರಿಸರದ ದೇವಸ್ಥಾನ, ದೈವಸ್ಥಾನದ ಮುಖ್ಯಸ್ಥರು, ಆಡಳಿತ ಮೊಕ್ತೇಸರರು, ಅರ್ಚಕರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By : Manjunath H D
PublicNext

PublicNext

18/12/2024 08:20 pm

Cinque Terre

31.24 K

Cinque Terre

0

ಸಂಬಂಧಿತ ಸುದ್ದಿ