ಉಡುಪಿ: ಉಡುಪಿಯ ಉಪನ್ಯಾಸಕಿ ಗಿರಿಜಾ ಹೆಗ್ಡೆ ಅವರು 'ಶಿಕ್ಷಕ ರತ್ನ'ಪ್ರಶಸ್ತಿಗೆ ಭಾಜನರಾಗಿದ್ದಾರೆ.ಇವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞಾ ಮತ್ತು ತ್ರಿಶಾ ಕಾಲೇಜಿನಲ್ಲಿ ಸೇವೆ ಸಲ್ಲಿಸುವಾಗ ವಿಧ್ಯಾರ್ಥಿಗಳನ್ನು ಸಿಎ ಪರೀಕ್ಷೆ ಪಾಸಾಗಲು ವಿಶೇಷವಾಗಿ ಶ್ರಮಿಸಿದ್ದು ಇಂದು ಇವರ ಹಲವಾರು ವಿಧ್ಯಾರ್ಥಿಗಳು ಸಿಎ ಪಾಸಾಗಿದ್ದಾರೆ. ಈಗಾಗಲೇ ದೇಶ ವಿದೇಶದ 10 ಸಾವಿರಕ್ಕಿಂತ ಹೆಚ್ಚಿನ ವಿಧ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆದು ಬದುಕನ್ನು ಸಾರ್ಥಕ್ಯ ಗೊಳಿಸಿದ್ದಾರೆ.
ಬಹುಮುಖ ವ್ಯಕ್ತಿತ್ವದ ಇವರ ಕಾರ್ಯ ಪ್ರಶಂಸಿಸಿ 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ 'ಶಿಕ್ಷಕ ರತ್ನ'ಪ್ರಶಸ್ತಿಯನ್ನು ಇದೇ ಬರುವ ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ.ಪ್ರಸ್ತುತ ಉಡುಪಿಯಲ್ಲಿ ಪತಿ ಮತ್ತು ಮಗನೊಂದಿಗೆ ನೆಲೆಸಿದ್ದು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ತಮ್ಮ ಎಲ್ಲಾ ವಿಧ್ಯಾರ್ಥಿಗಳಿಗೆ ಅರ್ಪಿಸಿದ್ದಾರೆ.
Kshetra Samachara
19/12/2024 05:32 pm