ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ನಿಯಮ ಉಲ್ಲಂಘಿಸಿದಲ್ಲಿ ದಂಡ ವಸೂಲಿ, ಪರವಾನಿಗೆ ರದ್ದು- ಪೌರಾಯುಕ್ತರ ಎಚ್ಚರಿಕೆ

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಹಾಗೂ ಗೂಡಂಗಡಿಗಳ ಮಾಲಕರು ತಮಗೆ ಸೂಚಿಸಿದ ಸೀಮಿತ ವಾಪ್ತಿಯನ್ನು ಹೊರತುಪಡಿಸಿ ಅನಧಿಕೃತವಾಗಿ ಹೆಚ್ಚುವರಿ ಪ್ರದೇಶವನ್ನು ವಿಸ್ತರಣೆ ಮಾಡಿ ಬಳಸಿಕೊಳ್ಳುವಂತಿಲ್ಲ. ಎಲ್ಲಾ ಗೂಡಂಗಡಿಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಸ್ವಚ್ಛತೆಯನ್ನು ಕಾಯ್ದು ಕೊಳ್ಳಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದೇ ಗೂಡಂಗಡಿಗಳು ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ತೊಂದರೆ ನೀಡುವಂತಿರಬಾರದು. ಫಾಸ್ಟ್‌ಫುಡ್ ಅಥವಾ ರಸ್ತೆ ಬದಿಗಳಲ್ಲಿ ಗೂಡಂಗಡಿಗಳ ಮೂಲಕ ಹೋಟೆಲ್ ನಡೆಸುವವರು ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯಿಂದ ಪರವಾನಿಗೆ ಪಡೆದಿರಬೇಕು. ಯಾವುದೇ ಗೂಡಂಗಡಿಗಳಲ್ಲಿ ತಂಬಾಕು ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.

ಬೀದಿ ಬದಿಯಲ್ಲಿ ವ್ಯಾಪಾರಸ್ಥರು ಹಾಗೂ ಗೂಡಂಗಡಿ ಮಾಲಕರು ನಗರಸಭೆ ಸೂಚಿಸಿರುವ ನಿಯಮವನ್ನು ಪಾಲಿಸದೇ ಇದ್ದಲ್ಲಿ ಅಂತಹ ಗೂಡಂಗಡಿ ಮಾಲಕರಿಗೆ 5000 ರೂ.ದಂಡ ವಿಧಿಸಿ, ಗೂಡಂಗಡಿಯನ್ನು ತೆರವುಗೊಳಿಸಿ ಪರವಾನಿಗೆ ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

18/12/2024 12:59 pm

Cinque Terre

756

Cinque Terre

0

ಸಂಬಂಧಿತ ಸುದ್ದಿ