ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮೊದಲ ದಿನದ ದತ್ತ ಜಯಂತಿಗೆ ಶಾಂತಿಯುತ ತೆರೆ

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ವತಿಯಿಂದ ಕಾಫಿನಾಡಿನ ವಿವಾದಿತ ಪೀಠದಲ್ಲಿ ನಡೆಯುತ್ತಿರುವ ಮೂರು ದಿನದ ದತ್ತಜಯಂತಿಗೆ ಚಾಲನೆ ಸಿಕ್ಕಿದೆ. ಮೊದಲ ದಿನವಾದ ಇಂದು ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಹಾಗೂ ಅನುಸೂಯ ಜಯಂತಿ ನಡೆಸಲಾಗಿದೆ.

ಸಾವಿರಕ್ಕೂ ಅಧಿಕ ಮಹಿಳೆಯರು ಪೊಲೀಸರ ಸರ್ಪಗಾವಲಿನಲ್ಲಿ ಹವಾಮಾನ ವೈಪರೀತ್ಯದ ನಡುವೆಯೂ ಕೇಸರಿ ಶಲ್ಯ ತೊಟ್ಟು ದತ್ತ ಪೀಠದಲ್ಲಿ ಅನುಸೂಯ ಜಯಂತಿ ಆಚರಿಸಿದ್ದಾರೆ. ದತ್ತಪೀಠದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಹಿಳೆಯರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಬಳೆ, ಅರಿಶಿನ ಕುಂಕುಮ ನೀಡಲಾಯ್ತು.

ಹವಾಮಾನ ವೈಪರೀತ್ಯದಿಂದಾಗಿ ದತ್ತಪೀಠದಲ್ಲಿ ದಟ್ಟ ಮಂಜಿನ ಜೊತೆ ಮಳೆಯಾದ್ದರಿಂದ ಮಹಿಳೆಯರು ಚಳಿಗೆ ನಡುಗಿ ಹೋದ್ರು. ಅಲ್ಲದೇ ಅಕ್ಕ ಪಕ್ಕದವರೇ ಕಾಣದಂತಾಗಿ ಒಬ್ಬರನೊಬ್ಬರು ಹುಡುಕಾಡಿದರು. ಒಟ್ಟಿನಲ್ಲಿ ಮೊದಲ ದಿನದ ದತ್ತ ಜಯಂತಿಗೆ ಶಾಂತಿಯುತ ತೆರೆ ಬಿದ್ದಿದ್ದು, ನಾಳೆ ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.

Edited By : Manjunath H D
PublicNext

PublicNext

12/12/2024 10:48 pm

Cinque Terre

9.35 K

Cinque Terre

0

ಸಂಬಂಧಿತ ಸುದ್ದಿ