ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: 4 ಸಾವಿರ ಪೊಲೀಸರಿಗೆ ವಿಶೇಷ ಊಟೋಪಚಾರ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದಿನಿಂದ ದತ್ತ ಜಯಂತಿ ಸಂಭ್ರಮ ಮನೆಮಾಡಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಆಗಮಿಸಿದ ಮಹಿಳೆಯರು ಅನಸೂಯ ಜಯಂತಿ ಆಚರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಈ ಬಾರಿ ಭದ್ರತೆಗಾಗಿ ನಾಲ್ಕು ಸಾವಿರ ಪೊಲೀಸರನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ನೇಮಿಸಲಾಗಿದೆ. ನಿಯೋಜನೆಗೊಂಡಿರುವ ಎಲ್ಲಾ ಪೊಲೀಸರಿಗೂ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಪೊಲೀಸ್ ಕವಾಯತು ಮೈದಾನದ ಬಳಿ ಒಂದು ದಿನಕ್ಕೆ 14ಸಾವಿರ ಪೊಲೀಸರಿಗೆ ಭರ್ಜರಿ ಊಟದ ತಯಾರಿ ನಡೆಯುತ್ತಿದೆ.

ಬಾಣಸಿಗ ಕಾರ್ತಿಕ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಜನ ಆಹಾರವನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. ಬೆಳಗ್ಗೆ ಉಪಹಾರಕ್ಕೆ ಪೂರಿ, ಸಾಗು, ಬೇಳೆ ಬಾತ್ ಮಧ್ಯಾಹ್ನದ ಊಟಕ್ಕೆ ಪಲಾವ್, ಅನ್ನ ಸಾಂಬಾರ್, ಪಲ್ಯ ಸೇರಿದಂತೆ ಬೂಂದಿ ಲಡ್ಡು ತಯಾರಿಸಿ ಉಣಬಡಿಸಲಾಗುತ್ತದೆ. ಊಟದ ವ್ಯವಸ್ಥೆಗೆ ಪೊಲೀಸರು ಫುಲ್ ಖುಷ್ ಆಗಿದ್ದು ಬಾಣಸಿಗ ಕಾರ್ತಿಕ್ ರವರ ಕೈ ರುಚಿಗೆ ಫುಲ್ ಫಿದಾ ಆಗಿದ್ದಾರೆ. ಈ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಡ್ಯಾನಿ ಬಾಣಸಿಗರನ್ನು ಮಾತನಾಡಿಸಿದ್ದಾರೆ ನೋಡಿ

Edited By : Nagesh Gaonkar
PublicNext

PublicNext

12/12/2024 05:20 pm

Cinque Terre

15.06 K

Cinque Terre

0

ಸಂಬಂಧಿತ ಸುದ್ದಿ