ಚಿಕ್ಕಮಗಳೂರು : ಡಾ. ಬೆಳವಾಡಿ ಹರೀಶ್ ಭಟ್ಟ ಸಂಗ್ರಹಿಸಿರುವ ಅನುವಾದಿತ 150 ಉಪನಿಷತ್ತುಗಳ ಎರಡು ಸಂಪುಟಗಳು ಲೋಕಾರ್ಪಣೆ ಯಾಗಲಿವೆ ಎಂದು ಸಾಹಿತಿ ಗಿರಿಜಾ ಶಂಕರ್ ತಿಳಿಸಿದ್ದಾರೆ.
ಡಿ.15ರ ಸಂಜೆ 4.30ಕ್ಕೆ ಡಾ. ಬೆಳವಾಡಿ ಹರೀಶ ಭಟ್ಟ ಸಂಗ್ರಹಿಸಿರುವ ಅನುವಾದಿತ 150 ಉಪನಿಷತ್ತುಗಳ ಎರಡು ಸಂಪುಟಗಳು ಲೋಕಾರ್ಪಣೆ ಆಗಲಿದೆ, ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಹರಿಹರ ಪುರ ಮಠಾಧೀಶರಾದ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಉದ್ಘಾಟಿಸುವರು. ಕಾಫಿ ಬೆಳಗಾರರ ಎಂ ಆರ್ ಗುರುಮೂರ್ತಿ, ಮತ್ತು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಸಂಪುಟಗಳನ್ನು ಲೋಕಾರ್ಪಣೆಗೊಳಿಸುವರು ಎಂದು ತಿಳಿಸಿದರು.
150 ಉಪನಿಷತ್ತುಗಳ ಮಹಾಸಂಪುಟಗಳನ್ನು ಖ್ಯಾತ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಪರಿಚಯಿಸುವರು. ಅತಿಥಿಗಳಾಗಿ ಕಾಫಿ ಬೆಳೆಗಾರ ಡಿಎಂ ಶಂಕರ್, ಮತ್ತು ಎಂ ಕೆ ಶ್ರೀನಿವಾಸ್ ಶೆಟ್ಟಿ, ಎಂಎಸ್ ಜಯರಾಮ್, ಜಿ.ವಿ ಕೃಷ್ಣ, ಜ್ಯೋತಿಮಿ ವೆಂಕಟ ಸುಬ್ಬರಾವ್, ಸಾಂಸ್ಕೃತಿಕ ಸಂಘದ ಆನಂದ್ ಕುಮಾರ್ ಶೆಟ್ಟಿ ಹಾಗೂ ದಾಸ ಸಾಹಿತ್ಯ ಭಜನಾ ಮಂಡಳಿಯ ಸಂಚಾಲಕ ಉದಯ್ ಸಿಂಹ ಪಾಲ್ಗೊಳ್ಳುವರು ಎಂದರು.
Kshetra Samachara
12/12/2024 05:28 pm