ಚಿತ್ರದುರ್ಗ : ಚಳ್ಳಕೆರೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಿರಿಯೂರು ಅರಣ್ಯ ಇಲಾಖೆ ACF ಸುರೇಶ್ ನಿವಾಸ ಸೇರಿ 4 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ 1 ಕೆ.ಜಿ ಚಿನ್ನ, 5 ಲಕ್ಷ ನಗದು ಹಣ, 50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 3 ಸೈಟ್, 9 ಎಕರೆ ಆಸ್ತಿ ಹಾಗೂ 3 ವಾಹನ ಪತ್ತೆಯಾಗಿದೆ.
ಚಳ್ಳಕೆರೆಯಲ್ಲಿ 2 ಮನೆ ಹಾಗೂ ಬೆಂಗಳೂರು ನಿವಾಸ & ಹಿರಿಯೂರಿನ ಕಚೇರಿ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ SP ವಾಸುದೇವ್ ರಾಮ್ ಡಿ.10 ಸಂಜೆ 6 ಗಂಟೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
Kshetra Samachara
10/12/2024 06:20 pm