ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬಸ್ ಹಾಗೂ ಕಾರಿನ ನಡುವೆ ಅಪಘಾತ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ದೇವಪುರದಹಟ್ಟಿ ಗ್ರಾಮದ ಬಳಿ ಕಾರು - KSRTC ಬಸ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಚಾಲಕರ ನಿಯಂತ್ರಣ ತಪ್ಪಿ ಬಸ್ ಹಾಗೂ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಚಾಲಕರಿಗೆ ಗಾಯಗಳಾಗಿವೆ.

ಹೊಸದುರ್ಗ ಕೊಬ್ರಿಪೇಟೆ ಮೂಲದ ಕಾರು ಚಾಲಕ ಮುಕ್ತಿಯಾರ್ (38) ಅವರನ್ನ ದಾವಣಗೆರೆ ಆಸ್ಪತ್ರೆಗೆ, ಕಲಬುರ್ಗಿ ಡಿಪೋದ KSRTC ಬಸ್ ಚಾಲಕ ಶರಣಪ್ಪನನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Edited By : Vinayak Patil
PublicNext

PublicNext

11/12/2024 09:24 am

Cinque Terre

17.67 K

Cinque Terre

0

ಸಂಬಂಧಿತ ಸುದ್ದಿ