ಚಿತ್ರದುರ್ಗ : ನಗರದ ಕಂಪಣರಂಗಸ್ವಾಮಿ ಪದವಿ ಪೂರ್ವ ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದ್ದು, ಮೂವರು ವಿದ್ಯಾರ್ಥಿಗಳು ವಿವಿಧ ಕ್ರೀಡೆಯಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಗರದ ಓಲ್ಡ್ ಮಿಡಲ್ ಸ್ಕೂಲ್ ಗ್ರೌಂಡ್ ಪಕ್ಕದ ಕಂಪಣರಂಗಸ್ವಾಮಿ ಪಿಯು ಕಾಲೇಜು ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಮರ್ಸ್ ವಿಭಾದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೌಮ್ಯ ಟೈಕ್ವಾಂಡೋ ಸ್ಪರ್ಧೆಯಲ್ಲಿ, ದ್ವೀತಿಯ ಪಿಯುಸಿ ವಿದ್ಯಾರ್ಥಿ ಪ್ರೀತಂ 400 ಮೀ ಹರ್ಡಲ್ಸ್ ವಿಭಾಗದಲ್ಲಿ, ಹಗ್ಗ ಜಗ್ಗಾಟ ವಿಭಾಗದಲ್ಲಿ ವಿದ್ಯಾರ್ಥಿನಿ ಚಿತ್ರಾರ್ಥಿ ರಾಜ್ಯ ಮಟ್ಟದಲ್ಲಿ ಜಯ ಗಳಿಸುವ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ, ಶಾಲ ಬೋಧಕ, ಬೀಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
Kshetra Samachara
11/12/2024 09:52 pm