ಚಳ್ಳಕೆರೆ : ಹೋಬಳಿಯ ಜಾಗನೂರಹಟ್ಟಿ ಗ್ರಾಮದ ವಾಸಿಯಾದ ರೋಜ ಎಂಬ ಬಾಣಂತಿ ಸಾವನ್ನು ಖಂಡಿಸಿ ಹೆರಿಗೆ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ಕರವೇ ಕನ್ನಡ ಸೇನೆ ರಾಜ್ಯಧ್ಯಕ್ಷ ಅರುಣ್ ಕುಮಾರ್ ಮಾತನಾಡಿ ಬಾಣಂತಿ ರೋಜಾ ಜಾಗನೂರಹಟ್ಟಿ ವಾಸಿಯಾಗಿದ್ದು, ದಿನಾಂಕ 31-10-2024 ರಂದು ಜಿಲ್ಲಾ ಆಸ್ಪತ್ರೆ ಚಿತ್ರದುರ್ಗದಲ್ಲಿ ಹೆರಿಗೆಗೆ ದಾಖಲಾಗಿದ್ದು, ಹೆರಿಗೆ ವೈದ್ಯರಾದ ಡಾ.ರೂಪಶ್ರೀ ಶಸ್ತ್ರ ಚಿಕಿತ್ಸೆ ಮಾಡಿ 5 ದಿನಗಳ ಕಾಲ ಒಳ ರೋಗಿಯಾಗಿ ದಾಖಲಿಸಿಕೊಂಡು ನಂತರ ಡಿಸ್ಚಾರ್ಜ್ ಮಾಡಿದ್ದಾರೆ. 5 ರಿಂದ 6 ದಿನಗಳ ನಂತರ ಆಸ್ಪತ್ರೆಗೆ ಬಂದು ಶಸ್ತ್ರ ಚಿಕಿತ್ಸೆ ಮಾಡಿರುವುದನ್ನು ಪರೀಕ್ಷಿಸಿಕೊಂಡು ಹೋಗಿದ್ದಾರೆ.
ಸುಮಾರು 40 ದಿನ ಕಳೆದರೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಗಾಯ ವಾಸಿಯಾಗಿರುವುದಿಲ್ಲ. ಕೀವು ತುಂಬಕೊಂಡು ನರಳಾಡಿ, ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ರಕ್ಷಸ್ತಾವವಾಗಿ, ನೋವಿನಿಂದ ಸುಸ್ತಾಗಿ ಬಾಣಂತಿ ರೋಜ ಸಾವಿಗಿಡಾಗಿದ್ದು, ಇದರಲ್ಲಿ ವೈದ್ಯರ ನಿರ್ಲಕ್ಷತನ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ರೆ ವೈದ್ಯರು ನೀಡಿರುವ ಚಿಕಿತ್ಸೆಯ ಬಗ್ಗೆ ತುಂಬಾ ಅನುಮಾನವಿದೆ. ಸರ್ಕಾರ ತನಿಖೆ ನಡೆಸಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಮೃತ ಬಾಣಂತಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
Kshetra Samachara
11/12/2024 09:47 pm