ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಕ್ಕರೆ ನಾಡಿನಲ್ಲಿ ಅಕ್ಕರೆಯ ನುಡಿ ಹಬ್ಬಕ್ಕೆ ಸಿದ್ಧತೆ - ಜಿಲ್ಲಾಧಿಕಾರಿಯಿಂದ ಪರಿಶೀಲನೆ

ಮಂಡ್ಯ: ಸಕ್ಕರೆ ನಾಡಿನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರದ ಸಿದ್ಧತೆಗಳು ನಡೆದಿವೆ. ಇದೇ ಡಿಸೆಂಬರ್ 22,23 ಹಾಗೂ 24ರಂದು ನಡೆಯಲಿರುವ ನುಡಿ ಹಬ್ಬಕ್ಕೆ ಸಾಹಿತ್ಯಾಸಕ್ತರನ್ನ ಸ್ವಾಗತಿಸಲು ಮಂಡ್ಯ ಸಿದ್ಧವಾಗುತ್ತಿದೆ.

ಮಂಡ್ಯ ಹೊರವಲಯದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಸಿದ್ಧವಾಗುತ್ತಿರುವ ವೇದಿಕೆಯಲ್ಲಿ ಕಾಮಗಾರಿಗಳು ಬರದಿಂದ ನಡೆದಿವೆ. ಪ್ರತಿನಿತ್ಯ ಜಿಲ್ಲಾಧಿಕಾರಿ ಕುಮಾರ‌ ಅವರು ಬಂದು‌ ಖುದ್ದು ನಿಂತು ಇಂಚಿಂಚು ಕಾಮಗಾರಿ ಪರಿಶೀಲಿಸಿ, ಸಮ್ಮೇಳನ ಸಿದ್ಧತೆಗೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ಮುಖ್ಯ ವೇದಿಕೆ‌, ಸಮಾನಾಂತರ ವೇದಿಕೆ, ಪಾಕಶಾಲೆ ಮಾಧ್ಯಮದವರಿಗೆ ಮೀಸಲಿಡಲಾಗಿರುವ ಸ್ಥಾನ ಎಲ್ಲವನ್ನೂ ಪರಿಶೀಲಿಸಿ ಬದಲಾವಣೆಗಳನ್ನ ತಿಳಿಸಿದ್ದಾರೆ. ಸ್ವಾಗತ ಕಮಾನುಗಳು ಸಮ್ಮೇಳನದ‌ ಮುಖ್ಯದ್ವಾರಗಳ ನೀಲಿನಕ್ಷೆ ಪರಿಶೀಲಿಸಿದ್ದಾರೆ.

Edited By : Nagesh Gaonkar
PublicNext

PublicNext

09/12/2024 08:12 pm

Cinque Terre

21.86 K

Cinque Terre

0

ಸಂಬಂಧಿತ ಸುದ್ದಿ