ಮಂಡ್ಯ: ಫೆಂಗಲ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿರೋ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಳೆದ ಭಾನುವಾರದಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಯವರ ಕಚೇರಿ ಅಂಗಳ ನೀರು ತುಂಬಿಕೊಂಡು ಕೊಳದಂತಾಗಿದೆ.
ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರ ಕಚೇರಿ ಸುತ್ತಮುತ್ತಲೂ ಮಳೆನೀರಿನ ನಿರ್ವಹಣೆ ಆಗುತ್ತಿಲ್ಲ ಎಂಬುದು ವಿಷಾದನೀಯ.
ತಮ್ಮ ಕೆಲಸಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಇಲ್ಲಿನ ಪರಿಸ್ಥಿತಿ ಅಸಹ್ಯ ಹುಟ್ಟಿಸುತ್ತಿದೆ. ಕೈತೋಟದ ಬಳಿ ಮಳೆನೀರಿನ ಕೊಯ್ಲಿಗಾಗಿ ಮಾಡಿರುವ ಎರಡು ಗುಂಡಿಗಳು ಮುಚ್ಚಿದೆ. ಜಿಲ್ಲೆಯಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕಾಮಗಾರಿಗಳನ್ನು ಮಾಡುವ ಜಿಲ್ಲಾಧಿಕಾರಿ ಕಚೇರಿಯಂತಹ ಶಕ್ತಿಕೇಂದ್ರದ ಪರಿಸ್ಥಿತಿ ನೋಡಿದ್ರೆ ಇಡೀ ಜಿಲ್ಲೆಯ ವ್ಯವಸ್ಥೆಯನ್ನೇ ಅಣಕಿಸುವಂತಿದೆ!
PublicNext
02/12/2024 10:37 pm