ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ-ಮೇಲುಕೋಟೆ ರಸ್ತೆ ಅವ್ಯವಸ್ಥೆ ; ಶಾಸಕರ ಫಾರಿನ್ ಟೂರ್ ಬಗ್ಗೆ ಮತದಾರರ ಬೇಸರ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕನ್ನಡ‌ ಹಬ್ಬಕ್ಕೆ ಅದ್ದೂರಿಯಾಗಿ ಸಿದ್ಧತೆ‌ ನಡೆದಿದೆ. ಆದ್ರೆ ಮಂಡ್ಯದಿಂದ ಮೇಲುಕೋಟೆಗೆ ಹೋಗುವ ರಸ್ತೆ ಅದ್ವಾನಗೊಂಡಿದೆ. ಮೇಲುಕೋಟೆ ಶಾಸಕರು ಈಗಬಗ್ಗೆ ಗಮನಹರಿಸುತ್ತಿಲ್ಲ. ವರ್ಷದ ಮೂರು ತಿಂಗಳು ಫಾರಿನ್ ಟೂರ್‌ನಲ್ಲಿರುತ್ತಾರೆ. ಅವರಿಂದ ನಿರೀಕ್ಷಿಸಿದಷ್ಟು ಕೆಲಸಗಳು ಆಗುತ್ತಿಲ್ಲ ಅಂತಾರೆ ಮೇಲುಕೋಟೆ ಕ್ಷೇತ್ರದ‌ ಮತದಾರರು.

ತಮ್ಮ ವ್ಯವಹಾರವನ್ನು ಹೊರ ದೇಶದಲ್ಲೇ ಇಟ್ಟು ಕೊಂಡಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಂದೆ ಪುಟ್ಟಣ್ಣಯ್ಯ ನಿಧನರಾದ‌ ನಂತರ‌ ವಿದೇಶದಲ್ಲಿನ ಎಲ್ಲಾ ಆಸ್ತಿ ಕಂಪನಿಗಳನ್ನು ಮಾರಾಟ‌ ಮಾಡಿ ಬಂದು ಹುಟ್ಟೂರಿನಲ್ಲಿ ನೆಲಸುವುದಾಗಿ ಚುನಾವಣೆ ಸಂದರ್ಭದಲ್ಲಿ‌ ಹೇಳಿದ್ದರು. ಆದರೆ ಅದ್ಯಾಕೋ ಅಲ್ಲಿಯ ವ್ಯವಹಾರಗಳನ್ನ ಹಾಗೇ ಇಟ್ಟುಕೊಂಡಿದ್ದಾರೆ. ಅದರೊಟ್ಟಿಗೆ ತಮ್ಮ ಸಂಸಾರವನ್ನು ಅಲ್ಲೇ‌ ವಿದೇಶದಲ್ಲಿ ಬಿಟ್ಟು ಇಲ್ಲಿಗೆ ಬಂದರು. ಭಾರತದಲ್ಲಿದ್ದರೂ ಇತ್ತ ಶಾಸಕರಾಗಿ ಇಲ್ಲಿನ ಸಾರ್ವಜನಿಕರ‌ ದುಃಖ ದುಮ್ಮಾನಗಳಿಗೆ ಸರಿಯಾಗಿ‌ ಸ್ಪಂದಿಸುತ್ತಿಲ್ಲ. ಯಾರೋ ತಮಗೆ‌ ಬೇಕಾದವರಿಗೆ ಫಾರಿನ್ ಫಂಡ್ ಕೊಡಿಸುತ್ತಾರೆ, ಬಿಟ್ಟರೆ ಮತದಾರರಿಗೆ‌ ಯಾವುದೇ‌ ಪ್ರಯೋಜನ ಮಾಡಿಕೊಟ್ಟಿಲ್ಲ ಅಂತಾರೆ ಮೇಲುಕೋಟೆ ಮತದಾರರು.

ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ‌ಜನರಿಗೆ ಕನಿಷ್ಠ‌ ಮೂಲಭೂತ ಸೌಕರ್ಯಗಳನ್ನ ನೀಡಬೇಕಾಗಿರೋದು ಆಯ್ಕೆಯಾದವರ ಕರ್ತವ್ಯ. ಆದ್ರೆ ದರ್ಶನ್ ಪುಟ್ಟಣ್ಣಯ್ಯ ಆಯ್ಕೆಯಾದ ಮೇಲೆ ಕ್ಷೇತ್ರದ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದ‌ ಕಡೆ‌ತಿರುಗಿ‌ ನೋಡೋದು ಅಪರೂಪ‌, ಬಂದರೂ ತಮ್ಮ ಒಡ್ಡೊಲಗದೊಂದಿಗೆ ಬರ್ತಾರೆ. ತಮ್ಮ ಭಟ್ಟಂಗಿ ಜೊತೆ‌ ಮಾತನಾಡ್ತಾರೆ, ಹೊಗ್ತಾರೆ. ಜನಸಾಮಾನ್ಯರ ಮಾತು ಕೇಳಲ್ಲ, ಅವರ ಕಡೆ ತಿರುಗಿ ಕೂಡಾ ನೋಡಲ್ಲ ಅಂತಾರೆ ಇಲ್ಲಿನ ಜನ.

ಮಂಡ್ಯ ಮೇಲುಕೊಟೆ ರಸ್ತೆ‌ ಹಳ್ಳಹಿಡಿದೆ. ಮಲ್ಲನಾಯಕನ ಕಟ್ಟೆಯಿಂದ ಸಂಪಳ್ಳಿ ಗೊರ ವಾಲೆ ಮಲ್ಲಿಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಸೇತುವೆ ಇನ್ನೇನು ಉರುಳಿ‌ ಬೀಳುವ ಹಂತದಲ್ಲಿದೆ. ಜನಸಾಮಾನ್ಯರು‌ ಜೀವ ಕೈಯಲ್ಲಿ ಹಿಡಿದುಕೊಂಡು‌ ಒಡಾಡುತ್ತಿದ್ದಾರೆ. ಇದ್ಯಾವುದರಪರಿವೆ ಇಲ್ಲದ ಶಾಸಕರು ತಮ್ಮ ಪಾಡಿಗೆ ತಾವಿದ್ದಾರೆ.

ಸೇತುವೆ ಬೀಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಅವರು ಅಪರ ಜಿಲ್ಲಾಧಿಕಾರಿಗೆ ಪರಿಶೀಲನೆ‌ ಮಾಡುವಂತೆ‌ ತಿಳಿಸಿದ್ದರು. ಅವರು ಫೋಟೋ ತರಿಸಿಕೊಂಡು ಕಚೇರಿಯಲ್ಲಿಟ್ಟು ಸನ್ಯಾಸ ದೀಕ್ಷೆ‌ ಸ್ವೀಕರಿಸಿ ಸ್ವಾಮಿಗಳಾಗಿ ಹೋದ್ರು. ಸೇತುವೆ ಹಾಗೇ ಇದೆ. ಇನ್ನಾದರೂ ಶಾಸಕರು ಜನಪರ ಕೆಲಸಕ್ಕೆ‌ ಮುಂದಾಗುತ್ತಾರಾ? ಕಾದು ನೋಡಬೇಕಿದೆ.

ವರದಿ: ಅರುಣ್ ಪ್ರಸಾದ್‌, ಪಬ್ಲಿಕ್ ನೆಕ್ಟ್ಸ್ ಮಂಡ್ಯ

Edited By : Ashok M
PublicNext

PublicNext

08/12/2024 02:45 pm

Cinque Terre

29.21 K

Cinque Terre

0