ಮಂಡ್ಯ; ಹನುಮ ಮಾಲಾದಾರಿ ವಿದ್ಯಾರ್ಥಿಗಳಿಗೆ ಶೂ ಧರಿಸಿ ಶಾಲೆಗೆ ಬರುವಂತೆ ಕ್ರೈಸ್ತ ಶಾಲೆಯೊಂದರ ಶಿಕ್ಷಕಿಯರು ಕಿರಿಕಿರಿ ನೀಡಿದ ಪರಿಣಾಮ ಆಡಳಿತ ಮಂಡಳಿ ವಿರುದ್ದ ಗರಂ ಆದ ಹಿಂದೂ ಸಂಘಟನೆಗಳ ಮುಖಂಡರು ಶಿಕ್ಷಕಿಯರ ಬೆವರಿಳಿಸಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಜರುಗಿದೆ.
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಕ್ರೈಸ್ತ ಶಾಲೆಯ ಶಿಕ್ಷಕಿಯರು ಹನುಮಮಾಲೆ ಹಾಕಿದ್ದ ವಿದ್ಯಾರ್ಥಿಗಳು ಶಾಲೆಗೆ ಶೂ ಹಾಕದೆ ಬಂದ ಕಾರಣ, ಶೂ ಹಾಕಿಕೊಂಡು ಬರುವಂತೆ ಹೊರಗೆ ಕಳುಹಿಸಿದ್ದಾರೆ.
ಒತ್ತಡಕ್ಕೆ ಬೇಸರಗೊಂಡ ವಿದ್ಯಾರ್ಥಿಗಳು ದಾರಿಯಲ್ಲಿ ಅಳುತ್ತಾ ಹೊಗುತ್ತಿರುವುದನ್ನ ಕಂಡ ಹಿಂದೂ ಸಂಘಟನೆ ಕಾರ್ಯಕರ್ತರು ವಿಚಾರಿಸಿದಾಗ ವಿಷಯ ತಿಳಿದು ಶಾಲೆ ಬಳಿ ಬಂದು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಚಳಿ ಬಿಡಿಸಿದ್ದಾರೆ. ನಂತರ ತಾವು ಮಾಡಿದ ತಪ್ಪಿನ ಅರಿವಾದ ಶಿಕ್ಷಕರು ಮತ್ತು ಆಡಳಿತ ಮಂಡಳಿ ತಪ್ಪೊಪ್ಪಿಕೊಂಡು ವಿದ್ಯಾರ್ಥಿಗಳನ್ನ ಶಾಲೆ ಒಳಗೆ ಬಿಟ್ಟಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
14/12/2024 07:09 pm