ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಚಿರತೆ ಕಾಟಕ್ಕೆ ಹೈರಾಣಾದ ಮಂಡ್ಯದ ರೈತಾಪಿ ಜನ - ಬೋನ್ ಇರಿಸಿ ಕೈತೊಳೆದುಕೊಂಡ ಅರಣ್ಯ ಇಲಾಖೆ

ಮಂಡ್ಯ: ಹೀಗೆ ರಾಜ ಗಾಂಭೀರ್ಯದಿಂದ ನಡು ರಸ್ತೆಯಲ್ಲಿ‌ ಒಡಾಡುತ್ತಿರೋದು ಸಾಕು ನಾಯಿಯಲ್ಲ, ಚಿರತೆ ಅನ್ನೋದು ನೋಡಿದಾಕ್ಷಣ ಎಲ್ಲರಿಗೂ ತಿಳಿಯುತ್ತೆ. ಆದ್ರೆ ಇಷ್ಟು‌ ನಿರಾತಂಕವಾಗಿ ಒಡಾಡುತ್ತಿರೋದು ಯಾವುದೋ ಸಂರಕ್ಷಿತಾರಣ್ಯದಲ್ಲಿ ಅಂದುಕೊಂಡರೆ ಅದು ನಿಮ್ಮ ತಪ್ಪು ತಿಳುವಳಿಕೆ.

ಇದು ಯಾವುದೋ ಸಂರಕ್ಷಿತಾರಣ್ಯವಲ್ಲ. ಮಂಡ್ಯದ ಒಂದು ಹಳ್ಳಿಯ ರಸ್ತೆ. ಸಂಜೆ ಆರು ಗಂಟೆ ಆಯ್ತು ಅಂದ್ರೆ ಈ ಹಳ್ಳಿ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಒಡಾಡ್ತಾರೆ. ಇನ್ನು ಗದ್ದೆ, ತೋಟ ಅಂತ ಹೋಗೊ ಮಾತು ದೂರ ಬಿಡಿ. ಈ ಚಿರತೆ ತನ್ನ ಕುಟುಂಬ ಸಮೇತವಾಗಿ ಬಂದು ಇಲ್ಲಿ ಬೀಡು ಬಿಟ್ಟು ಹದಿನೈದು ದಿನಾವಾಯ್ತು ಏನೋ ಶುಭಕಾರ್ಯಕ್ಕೆ ಬಂದಿರಬೇಕು. ಮುಗಿಸಿಕೊಂಡು ಹೋಗುತ್ತೆ ಅಂದ್ರೆ ಗಂಡ ಮಕ್ಕಳ ಜೊತೆ ಇಲ್ಲೇ ಸಂಸಾರ ಹೂಡಿದೆ.

ಇದು ಮಂಡ್ಯದ ಗಾಣದಾಳು ಮತ್ತು ಚಂದಗಾಲು ರಸ್ತೆಯ ಮದ್ಯ ಸಿಗೊ ಕೋಳಿ ಫಾರಂಹತ್ತಿರ ಮೊಕ್ಕಾಂ ಹೂಡಿದೆ. ಚಿರತೆ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆಗೆ ರೈತರು ತಿಳಿಸಿದ್ರು, ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನ್ ಇಟ್ಟು ಹೋದವರು ಇತ್ತ ತಿರುಗಿ ನೋಡಿಲ್ಲ ಅಂತಾರೆ ಇಲ್ಲಿನ ಜನ

ಬೈಟ್; ವಿಜಯಕುಮಾರ್, ಉಪಾಧ್ಯಕ್ಷ ಜಿಲ್ಲಾ ರೈತಸಂಘ

ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತಂದ್ರೆ ಆಗ್ಲೆ ನಮ್ಮೂರು ಚಿರತೆ ಹಿಡಿದಿದ್ದಾರೆ ಅಂತಾರೆ. ಅರಣ್ಯ ಇಲಾಖೆಯವರು ಚಿರತೆ ಹಿಡಿದು ಅಲ್ಲೆ ಬಿಟ್ಟು ಬಿಟ್ರಾ ಅನ್ನೊ ಅನುಮಾನ ಕೂಡಾ ಕಾಡ್ತಾ ಇದೆ. ಏನಾದ್ರು ಆಗಲಿ ಕೆಲವು ಪಡ್ಡೆ ಹೈಕಳು. ಈ ಚಿರತೆಯನ್ನ ಮಾತನಾಡಿಸುವ ಧೈರ್ಯಕ್ಕೂ ಕೈಹಾಕಿದ್ದಾರೆ ಅನ್ನೋ ಮಾಹಿತಿ ಇದೆ. ಇಸ್ಪೀಟು ಆಡೋಕೆ ಗದ್ದೆ ಬಯಲಿಗೆ ಹೋಗೊ ಟೀಮ್ ಕೂಡಾ ಚಿರತೆ ಬಗ್ಗೆ ನಿಗಾ ವಹಿಸಬೇಕು.

ಅರುಣ್ ಪ್ರಸಾದ್ ಪಬ್ಲಿಕ್ ನೆಕ್ಟ್ಸ್ ಮಂಡ್ಯ

Edited By : Somashekar
PublicNext

PublicNext

14/12/2024 11:46 am

Cinque Terre

16.63 K

Cinque Terre

1