ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಲ್ದೂರು ಪಿಎಸ್ಐ ಅಮಾನತು ಒಕ್ಕಲಿಗ ಸಂಘದ ವೈಯಕ್ತಿಕ ವಿಚಾರ - ಹೆಚ್.ಹೆಚ್ ದೇವರಾಜ್

ಚಿಕ್ಕಮಗಳೂರು : ಆಲ್ದೂರು ಪಟ್ಟಣದಲ್ಲಿ ಎರಡು ಸಮುದಾಯಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಒಕ್ಕಲಿಗರ ಸಂಘವು ಆಲ್ಲೂರು ಪಿಎಸ್‌ಐ ಅಮಾನತು ಮಾಡುವಂತೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಪಿಎಸ್‌ಐ ಅಮಾನತು ಮಾಡುವಂತೆ ಒಕ್ಕಲಿಗ ಸಮುದಾಯದ ಒತ್ತಾಯವಲ್ಲ ಇದು ಸಂಘದ ಅಧ್ಯಕ್ಷರ ವೈಯಕ್ತಿಕ ಒತ್ತಾಯ ಆಲ್ಲೂರು ಪಿಎಸ್‌ಐ ಘಟನೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಘಟನೆ ಸೌಹಾರ್ದಯುತವಾಗಿ ಬಗೆಹರಿಸಬೇಕು ಈ ಕುರಿತು ಶಾಸಕಿ ನಯನ ಮೋಟಮ್ಮ ಅವರೊಂದಿಗೆ ಮಾತನಾಡುತ್ತೇನೆ. ಆಲ್ಲೂರಿಗೆ ತನ್ನದೇ ಆದ ಇತಿಹಾಸ ಇದೆ. ಆಲ್ಲೂರಿನ ಬಸಪ್ಪ ಶೆಟ್ಟಿ ಸಿಎ ಚಂದ್ರೇಗೌಡ, ಸಿ.ಟಿ ರವಿ ಎಂಎಲ್‌ಎ ಆಗಿದ್ದಾರೆ. ನಾನು ಆಲ್ಲೂರಿನ ಅಳಿಯ ಈ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಲ್ಲ, ದಲಿತ ಮುಖಂಡರೊಂದಿಗೆ ಮಾತನಡುತ್ತೇನೆ ಎಂದು ಹೆಚ್. ಹೆಚ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

08/12/2024 10:28 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ