ಚಿಕ್ಕಮಗಳೂರು: ರಾಜ್ಯದಲ್ಲಿ ಗರ್ಭಿಣಿಯರ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ. ಬಾಣಂತಿಯರಿಗೆ ಕೇವಲ ಪೌಷ್ಟಿಕ ಆಹಾರ ನೀಡುವುದಲ್ಲ ಆ ಯೋಜನೆಗಳು ಸರಿಯಾಗಿ ಕಾರ್ಯಗತ ವಾಗಬೇಕೆಂದರು.
ಬಾಣಂತಿಯರ ಸಾವು ಇಡೀ ಪ್ರಪಂಚಕ್ಕೆ ಅವಮರೆಯಾದಿಯಾಗಿದ್ದು, ಬಾಣಂತಿಯರನ್ನು ಸಂರಕ್ಷಣೆ ಮಾಡಲಾಗುತ್ತಿಲ್ಲ ಎಂದರೆ ಪ್ರಪಂಚದಲ್ಲಿ ನಾವು ಇನ್ನು ಎಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇದೇ ವೇಳೆ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಸಮಸ್ಯೆ ಮಕ್ಕಳಿಗೆ ವಿತರಿಸುತ್ತಿರುವ ಕೋಳಿ ಮೊಟ್ಟೆಯ ಕುರಿತು ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ತಿಳಿಸಿದ್ದಾರೆ.
Kshetra Samachara
08/12/2024 07:09 pm