ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅಂಗನವಾಡಿಗೆ ಬೀಗ ಜಡಿದ ಪ್ರಕರಣ - ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯ

ಶಿವಮೊಗ್ಗ: ಅಪರಿಚಿತರು ಅಂಗನವಾಡಿಗೆ ಬೀಗ ಹಾಕಿದ್ದ ಪ್ರಕರಣ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಇದೀಗ ಸುಖಾಂತ್ಯಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರಗೋಡು ಗ್ರಾಮದಲ್ಲಿರುವ ಅಂಗನವಾಡಿಗೆ ಅದೇ ಗ್ರಾಮದ ನಿವಾಸಿ ನೇತ್ರಾವತಿ ಎಂಬುವವರು ಈ ಜಾಗ ನಮ್ಮ ಖಾತೆಯಲ್ಲಿ ಇದೆ ಎಂದು ಕ್ಯಾತೆ ತೆಗೆದು ಕಳೆದ ಮೂರು ದಿನಗಳಿಂದ ಬೀಗ ಜಡಿದಿದ್ದರು. ಈ ವಿಷಯ ತಿಳಿಯುತಿದ್ದಂತೆ ಸ್ಥಳಕ್ಕಾಗಮಿಸಿದ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಹೆದ್ದಾರಿಪುರ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಅಧಿಕಾರಿಗಳು ನೇತ್ರಾವತಿ ಅವರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

ಆದರೆ ನಮ್ಮ ಖಾತೆ ಜಾಗದಲ್ಲಿ ಅಂಗನವಾಡಿ ಕಟ್ಟಡವಿದ್ದರೂ ನಾವು ಅದಕ್ಕೆ ಅಡ್ಡಿಪಡಿಸಿರಲಿಲ್ಲ. ಆದರೆ, ಗ್ರಾಮ ಪಂಚಾಯತಿಯ ಪಿಡಿಓ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರು ಹೇಳಿ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಬಳಿಕ ಸ್ಥಳಕ್ಕಾಗಮಿಸಿದ ರಿಪ್ಪನಪೇಟೆ ರಾಜಸ್ವ ನಿರೀಕ್ಷಕರು ಹಾಗೂ ಪೊಲೀಸರು ಖಾಸಗಿ ವ್ಯಕ್ತಿಗಳ ಮನವೊಲಿಸಿ ಮುಂದಿನ ದಿನಗಳಲ್ಲಿ ಜಾಗದ ಸಂಪೂರ್ಣ ಸರ್ವೆ ಮಾಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿಗೆ ಹಾಕಿದ್ದ ಬೇಲಿ ತೆರವುಗೊಳಿಸಿ ಬೀಗ ತೆಗೆದಿದ್ದಾರೆ. ಇದೀಗ ಅಂಗನವಾಡಿಗೆ ಮಕ್ಕಳು ಆಗಮಿಸುತ್ತಿದ್ದಾರೆ.

Edited By : Shivu K
PublicNext

PublicNext

06/12/2024 11:55 am

Cinque Terre

26.52 K

Cinque Terre

0

ಸಂಬಂಧಿತ ಸುದ್ದಿ