ಬೆಂಗಳೂರು: ಟ್ರಾಫಿಕ್ ಫೈನ್ ಹೆಸರಲ್ಲಿ ಸೈಬರ್ ಖದೀಮರ ಕೈಚಳಕ ಹೆಚ್ಚಾಗ್ತಿರೋ ಹಿನ್ನಲೆ ಸಂಚಾರಿ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ರಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗಿದೆ.
ಟ್ರಾಫಿಕ್ ಫೈನ್ ಕಟ್ಟಬೇಕು ಸಂಚಾರಿ ನಿಯಮ ಉಲ್ಲಂಘಿಸಿದ್ದೀರಾ ಎಂದು ವಾಟ್ಸಾಪ್ ನಲ್ಲಿ ಸೈಬರ್ ಖದೀಮರು ಲಿಂಕ್ ಕಳಿಸ್ತಾರೆ.. ಲಿಂಕ್ ಒತ್ತಿದ್ರೆ ಅಕೌಂಟ್ ನಲ್ಲಿರುವ ಹಣ ಸೈಬರ್ ಖದೀಮರು ಎಗರಿಸ್ತಾ ಇದ್ದಾರಂತೆ.. ಈ ಬಗ್ಗೆ ಸಂಚಾರಿ ಜಂಟಿ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದು ಸಂಚಾರಿ ಪೊಲೀಸರು ಯಾವುದೇ ಕರೆ ಮಾಡುವುದಿಲ್ಲ. ಯಾವುದೇ ಲಿಂಕ್ ಕಳುಹಿಸುವುದಿಲ್ಲ. ಸಂಚಾರಿ ಉಲ್ಲಂಘನೆ ಕೇಸ್ ಇದ್ರೆ, ನೇರವಾಗಿ ವಾಹನ ಮಾಲೀಕರ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುತ್ತೆ. ಯಾರು ಈ ರೀತಿಯ ಸೈಬರ್ ವಂಚನೆಗೆ ಒಳಗಾಗಬಾರದು ಎಂದು ಸಾರ್ವಕನಿಕರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ
PublicNext
04/12/2024 04:13 pm